ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ನಿರೂಪಕಿಯರು ಇದ್ದಾರೆ. ಅದರಲ್ಲಿ ಅನುಶ್ರೀ ಅವರು ಕೂಡ ಒಬ್ಬರು ಎಂದು ಹೇಳಬಹುದು. ಇನ್ನೂ ಜನಪ್ರಿಯ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀ ಅವರ ಮನೆ ಹೇಗಿದೆ ಎಂದು ಇಲ್ಲಿ ನೋಡಬಹುದು. ಸುಮಾರು ಜನರಿಗೆ ತಮ್ಮ ಇಷ್ಟವಾದ ಕಲಾವಿದರು ಇರುವ ಮನೆ ಹೇಗಿರುತ್ತದೆ ಎಂದು ನೋಡುವುದಕ್ಕೆ ಆಸೆಯಿರುತ್ತದೆ. ಇದರಂತೆಯೇ ಕನ್ನಡದ ಜನಪ್ರಿಯ ಆಂಕರ್ ಅನುಶ್ರೀ ಅವರ ಮನೆಯ ಕೆಲ ದೃಶ್ಯಗಳನ್ನು ಇಲ್ಲಿ ನೀವು ನೋಡಬಹುದು.
ಇನ್ನು ಅನುಶ್ರೀ ಅವರು ಜನವರಿ 25 1988 ರಂದು ಸುರತ್ಕಲ್ ನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಸಂಪತ್ ಮತ್ತು ತಾಯಿಯ ಹೆಸರು ಶಶಿಕಲಾ. ಅನುಶ್ರೀ ಅವರು ಐದನೇ ತರಗತಿಯವರೆಗೂ ಬೆಂಗಳೂರಿನಲ್ಲಿರುವ ಸೇಂಟ್ ಥಾಮಸ್ ಶಾಲೆಯಲ್ಲಿ ಓದಿದ್ದಾರೆ. ಇದಾದ ಮೇಲೆ ಮಂಗಳೂರಿಗೆ ಶಿಫ್ಟ್ ಆಗಿ ಅಲ್ಲಿ ನಾರಾಯಣ ಗುರು ಶಾಲೆಯಲ್ಲಿ ಮುಂದುವರೆಸಿದರು.
ಇದಾದ ಮೇಲೆ ಮತ್ತೆ ಬೆಂಗಳೂರಿಗೆ ಬಂದು ತಮ್ಮ ಪದವಿಯನ್ನು ಮಾಡಿ ಮುಗಿಸಿದರು. ಇದಾದ ಮೇಲೆ ಇವರಿಗೆ ದೂರದರ್ಶನದಲ್ಲಿ ಹೋಸ್ಟ್ ಮಾಡುವುದಕ್ಕೆ ಸಾಕಷ್ಟು ಶೋಗಳಲ್ಲಿ ಅವಕಾಶಗಳು ದೊರಕಿದವು. ಅನುಶ್ರೀ ಅವರು ನಮ್ಮ ಟಿ.ವಿ ಎನ್ನುವ ವಾಹಿನಿಯಲ್ಲಿ ಮೊದಲನೆಯದಾಗಿ ಟೆಲಿ ಅಂತಾಕ್ಷರಿ ಎನ್ನುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದಾದ ಮೇಲೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಎನ್ನುವ ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಕಾರ್ಯಕ್ರಮದಿಂದ ಇವರು ಹೆಚ್ಚು ಜನಪ್ರಿಯತೆಯನ್ನು ಸ್ಥಾಪಿಸಿಕೊಂಡರು. ತದನಂತರ ಬಿಗ್ ಬಾಸ್ ಕನ್ನಡ ಸೀಸನ್ ಒಂದರಲ್ಲಿ ಕೂಡ ಭಾಗವಹಿಸಿದ್ದರು. ತದನಂತರ ಸರೆಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಫ್ಯಾಮಿಲಿ ವಾರ್ ಹೀಗೆ ಸಾಕಷ್ಟು ಈ ಕಾರ್ಯಕ್ರಮಗಳ ಸೀಸನ್ ಗಳನ್ನು ನಡೆಸಿಕೊಂಡು ಬಂದಿದ್ದಾರೆ.
ಇನ್ನು ಸಿನಿಮಾ ವಿಷಯಕ್ಕೆ ಬಂದರೆ ಇವರು 2011 ರಲ್ಲಿ ಭೂಮಿತಾಯಿ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿಕೊಂಡರು. ಇದಾದ ಮೇಲೆ ಮುರಳಿ ಮೀಟ್ಸ್ ಮೀರಾ ಚಿತ್ರದಲ್ಲಿ ನಾಯಕಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ತದನಂತರ ಬೆಳ್ಳಿಕಿರಣಾ, ಟ್ಯೂಬ್ ಲೈಟ್, ಬೆಂಕಿಪಟ್ಣ, ರಿಂಗ್ ಮಾಸ್ಟರ್, ಉತ್ತಮ ವಿಲನ್, ಮದ ಮತ್ತು ಮಾನಸಿ, ಉಪ್ಪು ಹುಳಿ ಖಾರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ…..