ಇಲ್ಲಿ ಕೆಲ ದಕ್ಷಿಣ ಭಾರತದ ನಟಿಯರ ತಂಗಿಯರು ನೋಡುವುದಕ್ಕೆ ಅವಳಿ ಜವಳಿಯಂತೆ ಇದ್ದಾರೆ. ಆ ನಟಿಯರು ಯಾರು ಯಾರು ಎಂದು ನೋಡೋಣ..
ನಟಿ ಅಂಬಿಕಾ ಅವರು ತಮಿಳು ಮಲಯಾಳಂ ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ತಂಗಿ ನಟಿ ರಾಧ ಅವರು ಕೂಡ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ನಟಿ ಜಯಸುಧಾ ಅವರು ತೆಲುಗು ತಮಿಳು ಮಲಯಾಳಂ ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ತಂಗಿ ನಟಿ ಸುಭಾಷಿಣಿ ಅವರು ಕೂಡ ದಕ್ಷಿಣ ಭಾರತದ ನಟಿಯಾಗಿದ್ದು ಜೊತೆಗೆ ಧಾರಾವಾಹಿಗಳಲ್ಲೂ ಕೂಡ ನಟಿಸುತ್ತಾರೆ.
ನಟಿ ಮಾಧವಿ ಅವರು ತೆಲುಗು ಮಲಯಾಳಂ ಕನ್ನಡ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ತಂಗಿಯ ಹೆಸರು ಕೀರ್ತಿ ಕುಮಾರಿ.
ನಟಿ ಸುಹಾಸಿನಿ ಅವರು ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಇವರ ತಂಗಿ ಅನು ಹಾಸನ್ ಅವರು ನಟಿಯ ಜೊತೆಗೆ ನಿರೂಪಕಿ ಕೂಡ ಆಗಿದ್ದಾರೆ.
ನಟಿ ಊರ್ವಶಿ ಅವರು ದಕ್ಷಿಣ ಭಾರತದ ಖ್ಯಾತ ನಟಿಯಾಗಿದ್ದು ಇವರ ಅಕ್ಕ ಕಲ್ಪನಾ ಅವರು ಕೂಡ ಮಲಯಾಳಂ ಮತ್ತು ತಮಿಳಿನಲ್ಲಿ ಫೇಮಸ್ ನಟಿಯಾಗಿದ್ದರು.
ನಟಿ ಸರಿತಾ ಅವರು ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದು ಇವರ ತಂಗಿ ವಿಜಿ ಚಂದ್ರಶೇಖರ್ ಅವರು ಕೂಡ ತಮಿಳು ಮಲಯಾಳಂ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆ.
ನಟಿ ಭಾನುಪ್ರಿಯ ಅವರು ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ತಂಗಿ ಶಾಂತಿಪ್ರಿಯ ಅವರು ಕೂಡ ತೆಲುಗು ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆ.
ನಟಿ ನಗ್ಮಾ ಅವರು ದಕ್ಷಿಣ ಭಾರತದ ಖ್ಯಾತ ನಟಿಯಾಗಿದ್ದು ಇವರ ತಂಗಿ ಜ್ಯೋತಿಕಾ ಅವರು ಕೂಡ ಸೌತ್ ಇಂಡಿಯಾದ ಸ್ಟಾರ್ ನಟಿ.
ಸಾಕ್ಷಿ ಶಿವಾನಂದ್ ಅವರು ಕೂಡ ಪಂಚ ಭಾಷಾ ನಟಿಯಾಗಿದ್ದು ಇವರ ತಂಗಿಯ ಹೆಸರು ಶಿಲ್ಪಾ ಆನಂದ್.
ನಟಿ ರಾಧಿಕಾ ಅವರು ದಕ್ಷಿಣ ಭಾರತದ ಜನಪ್ರಿಯ ನಟಿ ಆಗಿದ್ದು ಇವರ ತಂಗಿ ನಿರೋಷಾ ಅವರು ಕೂಡ ಸೌತ್ ಇಂಡಿಯಾದ ಸ್ಟಾರ್ ನಟಿಯಾಗಿದ್ದಾರೆ.
ನಟಿ ರವಳಿ ಅವರು ಪಂಚಭಾಷಾ ಸ್ಟಾರ್ ನಟಿ ಆಗಿದ್ದು ಇವರ ತಂಗಿ ಹರಿತ ಕೂಡ ನಟನೆಯ ಜೊತೆಗೆ ಧಾರಾವಾಹಿಗಳಲ್ಲಿ ಕೂಡ ನಟಿಸುತ್ತಿದ್ದಾರೆ.
ನಟಿ ಸಿಮ್ರಾನ್ ಅವರು ತೆಲುಗು ಮಲಯಾಳಂ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ತಂಗಿ ಮೋನಾಲ್ ಅವರು ಕೂಡ ತಮಿಳಿನ ಖ್ಯಾತ ನಟಿಯಾಗಿದ್ದರು.
ನಟಿ ಮಾಲಾಶ್ರೀ ಅವರು ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ ಆಗಿದ್ದಾರೆ. ಇನ್ನೂ ಇವರ ತಂಗಿ ಶುಭಾಶ್ರೀ ಅವರು ಕೂಡ ಫೇಮಸ್ ನಟಿಯಾಗಿದ್ದಾರೆ.
ನಟಿ ಸುಮಲತಾ ಅವರು ದಕ್ಷಿಣ ಭಾರತದ ಖ್ಯಾತ ನಟಿ ಆಗಿದ್ದು ಇವರ ತಂಗಿಯ ಹೆಸರು ಪ್ರಿಯಾ…..