ಕನ್ನಡದ ಖ್ಯಾತ ಸ್ಟಾರ್ ನಟ ಆಗಿದ್ದ ಚಿರು ಸರ್ಜಾ ಅವರು ಜೂನ್ 7 2022 ತಾರೀಕಿಗೆ ಮರಣ ಹೊಂದಿ 2 ವರ್ಷಗಳ ಕಾಲ ಮುಗಿಯಿತು. ಹೌದು ಚಿರು ಸರ್ಜಾ ಅವರು 2020 ರಲ್ಲಿ ಜೂನ್ 7 ರಂದು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದರು. ಇವರ ದಿಢೀರ್ ಸಾವು ಎಲ್ಲರ ಮನಸ್ಸಿಗೆ ತುಂಬಾನೇ ನೋವನ್ನು ಉಂಟು ಮಾಡಿತ್ತು.
ಈಗಲೂ ಸಹ ಚಿರು ಸರ್ಜಾ ಅವರನ್ನು ಪ್ರತಿದಿನ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಅವರ ಅಭಿಮಾನಿಗಳು ಕುಟುಂಬದವರು ಮತ್ತು ಅವರ ಪತ್ನಿ ಮೇಘನಾ ರಾಜ್ ಎಲ್ಲರೂ ಕೂಡ ಅವರ ನೆನಪಿನಲ್ಲಿಯೇ ಇನ್ನೂ ಇದ್ದಾರೆ. ಚಿರು ಅವರು ಮರಣ ಹೊಂದಿ 2 ವರ್ಷಗಳು ಆಯಿತು ಅಂದರೆ ಕಾಲ ಎಷ್ಟು ವೇಗವಾಗಿ ಓಡುತ್ತಿದೆ ಎಂದು ತಿಳಿಯುತ್ತದೆ.
ಇನ್ನೂ ಚಿರು ಸರ್ಜಾ ಅವರು ಮರಣ ಹೊಂದಿದ ಸಮಯದಲ್ಲಿ ಮೇಘನಾ ರಾಜ್ ಅವರು 4 ತಿಂಗಳ ಗರ್ಭಿಣಿಯಾಗಿದ್ದರು. ಅಂತಹ ಸಮಯದಲ್ಲೂ ಮೇಘನಾ ಅವರು ಚಿರು ಅವರನ್ನು ಕಳೆದುಕೊಂಡ ನೋವಿನ ಜೊತೆಗೆ ತನ್ನ ಮಗು ಹೊಟ್ಟೆಯಲ್ಲಿ ಇದ್ದ ಕಾರಣ ಧೈರ್ಯದಿಂದ ಸವಾಲುಗಳನ್ನು ಎದುರಿಸಿದರು.
ತದನಂತರ ಚಿರು ಮತ್ತು ಮೇಘನಾ ಅವರ ಮಗ ರಾಯನ್ ರಾಜ್ ಸರ್ಜಾ ಹುಟ್ಟಿನಿಂದ ಎಲ್ಲರ ಮುಖದಲ್ಲೂ ನಗು ಬರುವುದಕ್ಕೆ ಶುರುವಾಯಿತು. ಇನ್ನು ಮೇಘನಾ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಯಾವಾಗಲೂ ಸಕ್ರಿಯರಾಗಿದ್ದು ತಾನು ಮತ್ತು ತಮ್ಮ ಮಗನ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾನೆ ಇರುತ್ತಾರೆ.
ರಾಯನ್ ರಾಜ್ ಸರ್ಜಾ ಅಕ್ಟೋಬರ್ 22 2020 ರಂದು ಜನಿಸಿದ್ದಾನೆ. ಈ ದಿನ ಮೇಘನಾ ಮತ್ತು ಚಿರು ಸರ್ಜಾ ಅವರ ನಿಶ್ಚಿತಾರ್ಥ ದಿನವೂ ಕೂಡ ಆಗಿರುತ್ತದೆ. ಇನ್ನೂ ರಾಯನ್ ರಾಜ್ ಸರ್ಜಾ ಹುಟ್ಟಿ ಸುಮಾರು ಒಂದೂವರೆ ವರ್ಷಗಳಾಗಿವೆ.
ವಿಷಯಕ್ಕೆ ಬಂದರೆ ನಟಿ ಮೇಘನಾ ರಾಜ್ ಅವರು ತಮ್ಮ ಮಗನಿಗೆ ಅಮ್ಮ ಎನ್ನುವ ಪದವನ್ನು ಹೇಳಿಕೊಡಬೇಕಾದ್ರೆ ರಾಯನ್ ಮಾತ್ರ ಅಪ್ಪಾ ಎಂದು ಹೇಳುತ್ತಾನೆ. ಈ ವೀಡಿಯೋವನ್ನು ಮೇಘನಾ ರಾಜ್ ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ರಾಯನ್ ಗೆ ತನ್ನ ತಂದೆ ಇಲ್ಲದೆ ಇರುವ ಕಾರಣ ಅದು ಗೊತ್ತಿಲ್ಲದೆ ಇದ್ದರೂ ಕೂಡ ತನ್ನ ತಂದೆಯನ್ನು ಅಪ್ಪ ಎಂದು ಕರೆದು ನೆನಪಿಸಿಕೊಳ್ಳುತ್ತಿದ್ದಾನೆ…..