Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಅಪ್ಪು ಸಮಾಧಿ ಬಳಿ ನಡೆಯುತ್ತಿರುವ ದೃಶ್ಯ ತೋರಿಸಿ ಬಾಲಿವುಡ್ ನಟರನ್ನು ಉಗಿದ ಅಭಿಮಾನಿ, ಕಾರಣ ಮಾತ್ರ ವಿಭಿನ್ನವಾಗಿದೆ ನೋಡಿ !!

0

ಪುನೀತ್ ಅವರ ಹೆಸರನ್ನು ಕೇಳಿದರೆ ಸಾಕು ಮನಸ್ಸಿಗೆ ಒಂದು ರೀತಿ ನೋವು ಉಂಟಾಗುತ್ತದೆ. ಇವರು ಇದ್ದಾಗ ಸಾಕಷ್ಟು ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ. ಇವರು ಹೋದ ಮೇಲೂ ಕೂಡ ಅವರ ಕಣ್ಣುಗಳನ್ನು 4 ಜನರಿಗೆ ದಾನ ಮಾಡಿ ಯಾರಿಗೂ ಕೂಡ ಇರದೇ ಇರುವ ದೊಡ್ಡ ವ್ಯಕ್ತಿತ್ವ ಇದೆ ಎಂದು ತೋರಿಸಿಕೊಂಡರು.

ಅಪ್ಪು ಅವರು ಹೋದ ಮೇಲೆ ಅವರ ಅಭಿಮಾನಿಗಳು ಕೂಡ ಸಾಕಷ್ಟು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದಾರೆ ಮತ್ತು ಅಪ್ಪು ಸಮಾಧಿಯನ್ನು ನೋಡುವುದಕ್ಕೆ ಬಂದ ಅಭಿಮಾನಿಗಳು ಕೂಡ ತಮ್ಮ ಕಣ್ಣನ್ನು ದಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ಅಲ್ಲಿಗೆ ಹೋಗಿ ನೋಡಿದ ಒಬ್ಬ ಹಿಂದಿ ರಿಪೋಟರ್ ಬಾಲಿವುಡ್ ನಟ ನಟಿಯರ ಬಗ್ಗೆ ಹೀಗೆ ಮಾತನಾಡಿದ್ದಾರೆ ನೀವೆ ನೋಡಿ.

ಇನ್ನೂ ಪುನೀತ್ ಅವರ ವ್ಯಕ್ತಿತ್ವ ಹೇಗಿದೆ ಎನ್ನುವುದಕ್ಕೆ ಅವರ ಮರಣದ ದಿನ ಮತ್ತು ಅಂತ್ಯಕ್ರಿಯೆ ದಿನ ಬಂದಿದ್ದ ಅಭಿಮಾನಿಗಳ ಸಂಖ್ಯೆ ಸಾಕ್ಷಿಯಾಗಿದೆ. ಪುನೀತ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಇವರು ಮರಣ ಹೊಂದಿ 1 ತಿಂಗಳು ಆದರೂ ಕೂಡ ಇವರ ಸಮಾಧಿಯನ್ನು ನೋಡಲು ಸಾಕಷ್ಟು ಅಭಿಮಾನಿಗಳು ಮೂಲೆ ಮೂಲೆಗಳಿಂದ ಬರುತ್ತಿದ್ದಾರೆ.

ಇವರು ಮಾಡಿರುವ ಸಾಕಷ್ಟು ಸಮಾಜ ಸೇವೆಗಳು ಈಗ ಒಂದೊಂದಾಗಿಯೇ ಹೊರ ಬೀಳುತ್ತಿದೆ. ಪುನೀತ್ ಅವರ ಬಳಿ ಯಾರೇ ಏನೇ ಸಹಾಯ ಕೇಳಿದರು ಹಿಂದೆ ಮುಂದೆ ನೋಡದೆ ಮಾಡುತ್ತಿದ್ದರಂತೆ. ಆದರೆ ಇವರು ಸಹಾಯ ಮಾಡುತ್ತಿದ್ದನ್ನು ಎಲ್ಲೂ ಕೂಡ ಪ್ರಚಾರ ಮಾಡುತ್ತಿರಲಿಲ್ಲ. ಒಂದು ವೇಳೆ ಯಾರಾದರೂ ಪ್ರಚಾರ ಮಾಡಿದರೆ ಅವರಿಗೆ ಸರಿಯಾಗಿ ಬುದ್ಧಿ ಹೇಳುತ್ತಿದ್ದರಂತೆ.

ಪುನೀತ್ ಅವರು ಸಹಾಯ ಮಾಡಿದ ವ್ಯಕ್ತಿಗಳಿಗೆ ಮತ್ತು ಪುನೀತ್ ಅವರಿಗೆ ಬಿಟ್ಟರೆ ಯಾರಿಗೂ ಕೂಡ ತಿಳಿಯುತ್ತಿರಲಿಲ್ಲ. ಆದರೆ ಇವರು ಮರಣ ಹೊಂದಿದ ಮೇಲೆ ಇವರು ಮಾಡಿದ ಸಾಕಷ್ಟು ಸಮಾಜ ಸೇವೆಗಳು ಹೊರಕ್ಕೆ ಬರುತ್ತಿದೆ. ಇದನ್ನು ಕೇಳಿದರೆ ನಿಜಕ್ಕೂ ಎಲ್ಲರಿಗೂ ಖುಷಿ ಎನಿಸುತ್ತದೆ. ಆದರೆ ಇಂತಹ ವ್ಯಕ್ತಿ ಮತ್ತು ನಟನನ್ನು ಕಳೆದುಕೊಂಡಿರುವ ದುಃಖದ ಸಂಗತಿ ಕೊನೆಯವರೆಗೂ ಇರುತ್ತದೆ ಎಂದು ಹೇಳಬಹುದು.

ಪುನೀತ್ ಅವರನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ತುಂಬಾ ಇಷ್ಟ ಪಡುತ್ತಾರೆ. ಇವರ ನಟನೆ ಡ್ಯಾನ್ಸ್ ವ್ಯಕ್ತಿತ್ವ ಎಲ್ಲವೂ ಕೂಡ ಇಷ್ಟವಾಗುತ್ತಿತ್ತು. ಈ ರೀತಿಯ ವ್ಯಕ್ತಿತ್ವ ಇರುವ ನಟ ನಮ್ಮ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಮತ್ತೆ ಸಿಗುವುದು ತುಂಬಾ ಕಷ್ಟ. ಮತ್ತೆ ಪುನೀತ್ ಅವರು ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ…..

Leave A Reply