ನಮಸ್ಕಾರ ಸ್ನೇಹಿತರೇ, ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಬಹಳ ತುಂಬಾ ನೊಂದು ಹೋಗಿರುವ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರನ್ನು ನೆನೆದು ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾರ್ಚ್ 14ರಂದು ತಮ್ಮ ಹುಟ್ಟುಹಬ್ಬವನ್ನು ಈ ಬಾರಿ ಆಚರಣೆ ಮಾಡಿಕೊಂಡಿಲ್ಲ.
ಪ್ರತಿವರ್ಷ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರ ಹುಟ್ಟುಹಬ್ಬದ ದಿನ ಕುಟುಂಬದವರನ್ನು ವಿದೇಶಕ್ಕೆ ಟ್ರಿಪ್ ಕರೆದುಕೊಂಡು ಹೋಗಿ ಅಶ್ವಿನಿ ಮತ್ತು ಮಕ್ಕಳನ್ನು ಖುಷಿಪಡುತ್ತಿದ್ದರು. ಆದರೆ ಈಬಾರಿ ಅಶ್ವಿನಿ ಅವರ ಬರ್ತಡೆ ಆಚರಿಸುವುದಕ್ಕೆ ಅಶ್ವಿನಿ ಅವರ ಜೊತೆ ಅಪ್ಪು ಅವರು ಇಲ್ಲ.
ಆದರೆ ಅಶ್ವಿನಿ ಅವರು ವಿಶೇಷವಾಗಿ ತಮ್ಮ ಬರ್ತಡೆ ಯನ್ನು ಆಚರಿಸಿಕೊಳ್ಳಲು ತೀರ್ಮಾನಿಸಿದ್ದು ಬದಲಾಗಿ ಅಪ್ಪು ಅವರು ನೋಡಿಕೊಳ್ಳುತ್ತಿದ್ದ ಅನಾಥಾಶ್ರಮಗಳಿಗೆ ಹೊಸ ಬಟ್ಟೆಯನ್ನು ಪಠ್ಯಪುಸ್ತಕಗಳನ್ನು ಹಾಗು ಸಿಹಿತಿನಿಸುಗಳನ್ನು ಕೊಟ್ಟು ಬರುವ ನಿರ್ಧಾರ ಮಾಡಿದ್ದಾರೆ.
ಇನ್ನು ಇದೇ ತಿಂಗಳು ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ. ಈ ದಿನದಂದು ಅಪ್ಪು ಅವರ ಕೊನೆಯ ಚಿತ್ರವಾದ ಜೇಮ್ಸ್ ಸಿನಿಮಾ ರಿಲೀಸ್ ಆಗಲಿದೆ. ಇನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಪ್ಪು ಅವರ ಮಗಳಾದ ದೃತಿ ಅವರು ಕೊಡ ಬೆಂಗಳೂರಿಗೆ ಬರಲಿದ್ದಾರೆ.
ಆಶ್ರಮದಲ್ಲಿ ಅಪ್ಪ-ಅಮ್ಮನ ಬರ್ತಡೆ ಆಚರಿಸುವುದಕ್ಕೆ ಮಗಳು ಕೂಡ ಬರುತ್ತಿದ್ದು ಅಪ್ಪನಂತೆ ಮಗಳು ಕೂಡ ಬಡವರು ಅನಾಥರು ಎಂದರೆ ದೃತಿ ಅವರು ಕೂಡ ಇಷ್ಟಪಡುತ್ತಾರೆ.
ಇನ್ನೊ ಬರ್ತಡೇ ಎಂದರೆ ಸಾಕು ಕುಡಿದು ತಿಂದು ಹಾಳು ಮಾಡುವ ಜನರ ಮಧ್ಯೆ ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಇದ್ದಾರೆ ಎಂದರೆ ಅದು ನಿಜಕ್ಕೂ ಖುಷಿ ಪಡುವಂತಹ ವಿಚಾರ.
ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ….