ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕಂಡರೆ ಎಲ್ಲರಿಗೂ ತುಂಬ ಪ್ರೀತಿ ಮತ್ತು ಗೌರವ. ಇವರಿಗೆ ದೊಡ್ಡ ಅಭಿಮಾನಿಗಳ ಸಂಘವೇ ಇದೆ ಎಂದು ಹೇಳಬಹುದು. ಡಾ ವಿಷ್ಣುವರ್ಧನ್ ಅವರು ಇದ್ದಾಗ ಎಲ್ಲರಿಗೂ ಪ್ರೀತಿ ವಾತ್ಸಲ್ಯಗಳನ್ನು ನೀಡುತ್ತಿದ್ದರು. ಇದರ ಕಾರಣದಿಂದಲೇ ಇವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿ ಏರಿದ್ದಾರೆ.
ಡಾ ರಾಜ್ ಕುಮಾರ್ ಮತ್ತು ಡಾ ವಿಷ್ಣುವರ್ಧನ್ ಅವರು ಇಬ್ಬರೂ ಇದ್ದಾಗ ಇವರಿಬ್ಬರ ಕುಟುಂಬದ ಬಗ್ಗೆ ಸಾಕಷ್ಟು ಸುಳ್ಳು ಪ್ರಚಾರಗಳನ್ನು ಹಬ್ಬಿಸುತ್ತಿದ್ದರು. ಆದರೂ ಕೂಡ ಇವರು ಹೆಚ್ಚಿನ ಮಾತನ್ನೂ ಆಡದೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡು ಬಂದಿದ್ದಾರೆ. ಇನ್ನೂ ಡಾ ವಿಷ್ಣುವರ್ಧನ್ ಅವರ ಬಗ್ಗೆ ತೆಲುಗಿನ ನಟ ವಿಜಯರಂಗರಾಜು ಅವರು ಸ್ವಲ್ಪ ಕೆಟ್ಟದಾಗಿ ಮಾತನಾಡಿದ್ದರು.
ಇದಕ್ಕಾಗಿ ಒಂದು ಸಂದರ್ಭದಲ್ಲಿ ಇವರು ಕ್ಷಮೆ ಕೂಡ ಕೇಳಿದ್ದರು. ಈ ಗೌರವವನ್ನು ಡಾ ವಿಷ್ಣುವರ್ಧನ್ ಅವರು ಇಂದಿಗೂ ಕೂಡ ಉಳಿಸಿಕೊಂಡು ಬಂದಿದ್ದಾರೆ. ಇದರ ಸಲುವಾಗಿ ನಮ್ಮ ಕನ್ನಡ ಚಿತ್ರರಂಗದ ಸಾಕಷ್ಟು ನಟರು ಡಾ ವಿಷ್ಣುವರ್ಧನ್ ಅವರ ಪರವಾಗಿ ಮಾತನಾಡಿದ್ದರು. ಅದರಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬರು.
ಹೌದು ಪುನೀತ್ ಅವರು ವಿಷ್ಣು ಅವರನ್ನು ಕುರಿತು ನಮ್ಮ ಕರುನಾಡಿನ ಮೇರು ನಟರಲ್ಲಿ ವಿಷ್ಣು ಅವರ ಬಗ್ಗೆ ಮಾತನಾಡಿರುವ ಆ ನಟ ಕ್ಷಮೆಯನ್ನು ಕೇಳಬೇಕು. ನಮ್ಮ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ. ಹಾಗಾಗಿ ಎಲ್ಲಾ ಕಲಾವಿದರ ಕುಟುಂಬಕ್ಕೂ ಗೌರವ ನೀಡುವುದು ನಮ್ಮ ಮೊದಲ ಕರ್ತವ್ಯ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದರು.
ಡಾ ರಾಜ್ ಕುಮಾರ್ ಅವರು ಹೇಳಿದಂತೆ ಚಿತ್ರರಂಗದಲ್ಲಿರುವ ಪ್ರತಿಯೊಬ್ಬ ಕಲಾವಿದರಿಗೂ ಕೂಡ ಗೌರವವನ್ನು ನೀಡಬೇಕು. ಇದೇ ನಾವು ಅವರಿಗೆ ಕೊಟ್ಟ ದೊಡ್ಡ ಸನ್ಮಾನ ಎಂಬುದನ್ನು ಪುನೀತ್ ಅವರು ತಾವು ಇರುವವರೆಗೂ ಪಾಲಿಸಿಕೊಂಡು ಬಂದಿದ್ದರು.
ಇನ್ನು ಇತ್ತೀಚೆಗಷ್ಟೇ ವಿಷ್ಣು ಅವರ 70ನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪುನೀತ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಷ್ಣು ಮತ್ತು ಪುನೀತ್ ಅವರು ಇಬ್ಬರು ಇರುವ ಫೋಟೋಗಳನ್ನು ಹಂಚಿಕೊಂಡು ಅವರನ್ನು ಸ್ಮರಿಸಿಕೊಂಡಿದ್ದರು. ಪುನೀತ್ ಅವರಿಗೆ ಮೊದಲಿನಿಂದಲೂ ವಿಷ್ಣುವರ್ಧನ್ ಅವರ ಬಗ್ಗೆ ತುಂಬಾ ಗೌರವವಿತ್ತು. ಆದರೆ ದುರದೃಷ್ಟವಶಾತ್ ನಮ್ಮ ಕನ್ನಡ ಚಿತ್ರರಂಗದಲ್ಲಿ ಈ ಇಬ್ಬರು ನಟರು ಕೂಡ ನಮ್ಮ ಜೊತೆ ಇಲ್ಲ…..