ಅಪ್ಪುಗಾಗಿ ಬಾನದಾರಿಯಲ್ಲಿ ಹಾಡು ಹಾಡಿ ಭಾವುಕರಾದ ಶಿವಣ್ಣ..!! ಅಪ್ಪು ರವರನ್ನು ನೆನೆಯುತ್ತಾ ಎಷ್ಟು ನೋವಿ.ನಿಂದ ಹಾಡಿದ್ದಾರೆ ನೋಡಿ ವಿಡಿಯೋ ಇಲ್ಲಿದೆ !!
ನಮ್ಮ ಅಪ್ಪು ಅವರ ಮರಣವನ್ನು ಈಗಲೂ ಕೂಡ ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಪ್ಪು ಮಾಡಿದ ಕೆಲಸಗಳು ಅಪ್ಪು ಅವರ ಗುಣ ಅಪ್ಪು ಅವರ ನಟನೆ ಎಲ್ಲವೂ ಕೂಡ ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ. ಇನ್ನೂ ಇವರು ಇದ್ದ ಸಮಯದಲ್ಲಿ ಮಾಡಿರುವ ಸಾಕಷ್ಟು ಸಮಾಜ ಸೇವೆಗಳು ಅವರು ತೀರಿಕೊಂಡ ಮೇಲೆ ಒಂದೊಂದಾಗಿಯೇ ಹೊರಬಂತು.
ಇದನ್ನು ಕೇಳಿದಾಗ ಎಲ್ಲರಿಗೂ ಕೂಡ ತುಂಬಾನೇ ಖುಷಿಯಾಯಿತು. ಇನ್ನೂ ಇದನ್ನು ಅಪ್ಪು ಅಭಿಮಾನಿಗಳು ಸಹ ಅವರನ್ನು ಪಾಲಿಸುತ್ತಾ ಸಾಕಷ್ಟು ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ. ಯಾವುದೇ ಕಾರ್ಯಕ್ರಮ ಆಗಿರಬಹುದು ಯಾವುದೇ ಪೂಜೆ ಪುನಸ್ಕಾರ ಆಗಿರಬಹುದು ಯಾವುದೇ ಹಬ್ಬ ಆಗಿರಬಹುದು ಪುನೀತ್ ಅವರನ್ನು ನೆನಪಿಸಿಕೊಳ್ಳದೆ ಆ ಕಾರ್ಯವನ್ನು ಶುರು ಮಾಡಿಕೊಳ್ಳುವುದಿಲ್ಲ.
ಅಷ್ಟರ ಮಟ್ಟಿಗೆ ಅಪ್ಪು ದೇವರಾಗಿ ಇದ್ದಾರೆ. ಇನ್ನೂ ಯಾವುದೇ ಸಿನಿಮಾ ಬಿಡುಗಡೆಯಾಗುವ ಮುನ್ನ ಅಪ್ಪು ಅವರನ್ನು ನೆನೆದು ಅವರ ಫೋಟೋವನ್ನು ತೋರಿಸಿ ನಂತರ ಸಿನಿಮಾವನ್ನು ತೋರಿಸಲಾಗುತ್ತದೆ. ಹಾಗೆಯೇ ಹಬ್ಬಗಳಲ್ಲಿ ಸಹ ಅಂದರೆ ಗೌರಿ ಗಣೇಶ ಹಬ್ಬದ ದಿನದಂದು ಕೂಡ ದೇವರ ಪಕ್ಕ ಅಪ್ಪು ಭಾವಚಿತ್ರವನ್ನು ಇಟ್ಟು ದೇವರಂತೆಯೇ ಪೂಜಿಸುತ್ತಾರೆ.
ಇವೆಲ್ಲವನ್ನು ನೋಡಿದರೆ ಅಪ್ಪು ಅವರು ಎಷ್ಟು ಒಳ್ಳೆಯವರು ಅವರಿಗೆ ಎಷ್ಟು ಒಳ್ಳೆಯತನ ಇತ್ತು ಎಂದು ಗೊತ್ತಾಗುತ್ತದೆ. ಇನ್ನು ಈ ರೀತಿಯ ನಟನಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ರೀತಿ ಮರಣ ಬಂದಿರುವುದು ಎಲ್ಲರಿಗೂ ಒಂದು ನೋವನ್ನು ಉಂಟು ಮಾಡಿಸುತ್ತದೆ. ಈ ನೋವು ಎಂದೆಂದಿಗೂ ನಮ್ಮ ಜೊತೆ ಹೀಗೆ ಇರುತ್ತದೆ. ಇದನ್ನು ಮರೆಯುವುದಕ್ಕೇ ಯಾರಿಗೂ ಕೂಡ ಆಗುವುದಿಲ್ಲ.
ಇನ್ನು ಇತ್ತೀಚೆಗೆ ಅಷ್ಟೇ ಸೈಮಾ ಅವಾರ್ಡ್ಸ್ ಜರುಗಿತು. ಈ ಕಾರ್ಯಕ್ರಮಕ್ಕೆ ಸಾಕಷ್ಟು ನಟ ನಟಿಯರು ಇತರರು ಆಗಮನ ಮಾಡಿದ್ದರು. ಹಾಗೆಯೇ ಅಲ್ಲಿ ಶಿವಣ್ಣ ಅವರು ವೇದಿಕೆಯ ಮೇಲೆ ಅಪ್ಪು ಅವರನ್ನು ನೆನೆದು ಅವರಿಗಾಗಿ ಬಾನದಾರಿಯಲಿ ಹಾಡನ್ನು ಹಾಡಿ ಭಾವುಕರಾದರು. ಶಿವಣ್ಣ ಅವರ ಜೊತೆಗೆ ರಣ್ವೀರ್ ಸಿಂಗ್, ರಾಕಿಂಗ್ ಸ್ಟಾರ್ ಯಶ್, ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಇನ್ನಿತರರು ಕೂಡ ವೇದಿಕೆಯ ಮೇಲೆ ಇದ್ದರು……