ಕನ್ನಡದ ಖ್ಯಾತ ನಟ ಶ್ರೀಮುರಳಿ ಅವರಿಗೆ ಇಬ್ಬರು ಮಕ್ಕಳು ಮಗನ ಹೆಸರು ಅಗಸ್ತ್ಯ ಶ್ರೀಮುರಳಿ ಮತ್ತು ಮಗಳ ಹೆಸರು ಅತೀವ ಶ್ರೀಮುರಳಿ ಎಂದು. ಇನ್ನೂ ಶ್ರೀಮುರಳಿ ಅವರಿಗೆ ಡಾನ್ಸ್ ಎಂದರೆ ಪಂಚಪ್ರಾಣ. ಇವರಂತೆ ತಮ್ಮ ಮಗಳು ಅತೀವ ಶ್ರೀಮುರಳಿ ಅವರು ಕೂಡ ಎಷ್ಟು ಚೆನ್ನಾಗಿ ಡಾನ್ಸ್ ಮಾಡಿದ್ದಾರೆ ನೋಡಿ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದಾರೆ.
ಇನ್ನು ಶ್ರೀಮುರಳಿ ಅವರು ಡಿಸೆಂಬರ್ 17 1988 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಎಸ್ ಎ ಚಿನ್ನೇಗೌಡ ಮತ್ತು ತಾಯಿಯ ಹೆಸರು ಜಯಮ್ಮ. ಇವರ ತಂದೆ ಪಾರ್ವತಿ ರಾಜ್ ಕುಮಾರ್ ಅವರಿಗೆ ಸ್ವಂತ ಸಹೋದರ ಆಗಬೇಕು. ಹಾಗಾಗಿ ಡಾ ರಾಜ್ ಕುಮಾರ್ ಅವರ ಕುಟುಂಬವು ಇವರಿಗೆ ಸಂಬಂಧಿಕರಾಗಬೇಕು. ಇನ್ನೂ ಎಸ್ ಎ ಚಿನ್ನೇಗೌಡ ಅವರು ಕೂಡ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು ಮತ್ತು ಡಿಸ್ಟ್ರಿಬ್ಯೂಟರ್ ಕೂಡ ಹೌದು.
ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರು ಕೂಡ ಇವರಿಗೆ ಸ್ವಂತ ಅಣ್ಣ ಆಗಬೇಕು. ಶ್ರೀ ಮುರಳಿ ಅವರು ತಮ್ಮ ಸಿನಿಮಾ ಜೀವನವನ್ನು 2003 ರಲ್ಲಿ ಚಂದ್ರ ಚಕೋರಿ ಎಂಬ ಕನ್ನಡ ಚಿತ್ರದ ಮೂಲಕ ಶುರು ಮಾಡಿಕೊಂಡರು.
ಇದಾದ ಮೇಲೆ ಕಾಂತಿ, ಪ್ರೀತಿಗಾಗಿ, ಮಿಂಚಿನ ಓಟ, ಸಿಹಿಗಾಳಿ, ಶ್ರೀಹರಿಕಥೆ, ಹರೆ ರಾಮ ಹರೆ ಕೃಷ್ಣ, ಉಗ್ರಂ, ಅಧ್ಯಕ್ಷ, ರಥಾವರ, ಮಫ್ತಿ, ಭರಾಟೆ, ಮದಗಜ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಮೊದಲನೆಯ ಸಿನಿಮಾ ಚಂದ್ರಚಕೋರಿ ಚಿತ್ರದಲ್ಲಿ ನಟಿಸಿದ್ದಕ್ಕೆ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ.
ಶ್ರೀಮುರಳಿ ಅವರು ಕನ್ನಡದಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನೂ ಶ್ರೀಮುರಳಿ ಅವರು ಮೇ 11 2008 ರಲ್ಲಿ ವಿದ್ಯಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಶ್ರೀಮುರಳಿ ಅವರ ಮಗಳು ಅತೀವ ಶ್ರೀಮುರಳಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಇಲ್ಲಿ ನೀವು ನೋಡಬಹುದು …..