Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಅನಿಲ್ ಕುಂಬ್ಳೆ ಪತ್ನಿ ಚೇತನಾ ಅವರ ಮೊದಲ ಪತಿ ಯಾರು ?? ವಿಚ್ಛೇದನವಾದ ಅವರನ್ನು ಕುಂಬ್ಳೆ ಅವರು ಎರಡನೇ ಮದುವೆಯಾಗಿದ್ದು ಯಾಕೆ ಗೊತ್ತಾ ??

0

ಈಗಿನ ಕಾಲದಲ್ಲಿ ನಮ್ಮ ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕನ್ನಡವನ್ನು ಮಾತನಾಡಿದರೂ ಕೂಡ ಪರಭಾಷೆಯಲ್ಲಿ ಅವರಿಗೆ ಹೆಚ್ಚು ಜನಪ್ರಿಯತೆ ಬಂದರೆ ಕನ್ನಡವನ್ನೇ ಮರೆತು ಬಿಡುತ್ತಾರೆ. ಎಷ್ಟರ ಮಟ್ಟಿಗೆ ಅವರು ಮರೆತು ಬಿಡುತ್ತಾರೆ ಎಂದರೆ ಅವರಿಗೆ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲವೇನೋ ಎನ್ನುವ ರೀತಿ ಆಡುತ್ತಾರೆ.

ಆದರೆ ಅನಿಲ್ ಕುಂಬ್ಳೆ ಅವರು ನಮಗೆ ಮೊದಲು ಏಕೆ ಇಷ್ಟವಾಗುತ್ತಾರೆ ಎಂದರೆ ಇವರು ನಮ್ಮ ಕರ್ನಾಟಕದವರೇ ಆಗಿದ್ದರೂ ಕೂಡ ಅಷ್ಟು ದೊಡ್ಡ ಮಟ್ಟಕ್ಕೆ ಹೋದರೂ ಇವರು ನಮ್ಮ ಕನ್ನಡ ಭಾಷೆಯನ್ನು ತುಂಬಾ ಅಚ್ಚುಕಟ್ಟಾಗಿ ಮಾತನಾಡುತ್ತಾರೆ. ಈ ಗುಣವು ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಇನ್ನೂ ಅನಿಲ್ ಕುಂಬ್ಳೆ ಅವರ ಮತ್ತೊಂದು ವಿಚಾರವನ್ನು ಕೇಳಿದರೆ ನಿಮಗೆ ಅವರ ಮೇಲೆ ಇನ್ನೂ ಹೆಮ್ಮೆ ಗೌರವ ಅನಿಸುತ್ತದೆ ಮತ್ತು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಬಹುದು.

ಈಗ ಅನಿಲ್ ಕುಂಬ್ಳೆ ಅವರ ಪತ್ನಿ ಚೇತನಾ ಯಾರು ಮತ್ತು ಅವರ ಮೊದಲ ಪತಿ ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ. ಚೇತನ ಅವರು 1986 ರಲ್ಲಿ ಕುಮಾರ್ ವಿ ಜಾಗೀದಾರ್ ಎನ್ನುವವರನ್ನು ಮೈಸೂರಿನಲ್ಲಿ ವಿವಾಹ ಮಾಡಿಕೊಳ್ಳುತ್ತಾರೆ. ಇವರಿಬ್ಬರ ಸಂಸಾರವು ತುಂಬ ಸೊಗಸಾಗಿ ನಡೆಯುತ್ತಿರುತ್ತದೆ. 1994 ರಲ್ಲಿ ಇವರಿಗೆ ಅರುಣಿ ಎನ್ನುವ ಮಗಳು ಜನಿಸುತ್ತಾಳೆ.

ಆದರೆ ಸಾಕಷ್ಟು ಕಾರಣಗಳಿಂದ ಇವರ ಮಧ್ಯೆ ತುಂಬ ಕಿರಿಕಿರಿ ಉಂಟಾಗುತ್ತದೆ. ಜೀವನದಲ್ಲಿ ಮದುವೆಯ ಏಕೆ ಆದೆ ಈ ಸಂಸಾರ ಎನ್ನುವುದೇ ಬೇಡ ಎನ್ನುವ ಮಟ್ಟಿಗೆ ಚೇತನ ಅವರು ನೋವನ್ನು ಪಡುತ್ತಾರೆ. ಇದರಿಂದ ಇವರಿಬ್ಬರು 1998 ರಲ್ಲಿ ವಿಚ್ಛೇದನ ತೆಗೆದುಕೊಂಡು ದೂರವಾಗುತ್ತಾರೆ. ಆದರೆ ಕುಮಾರ್ ಅವರು ತಮ್ಮ ಮಗಳು ಅವರಿಗೆ ಬೇಕೆಂದು ಹೋರಾಟ ಮಾಡುತ್ತಾರೆ.

ಇದರ ಜೊತೆಗೆ ಚೇತನಾ ಅವರು ಕೂಡ ಮಗಳಿಗಾಗಿ ಹೋರಾಟವನ್ನು ನಡೆಸುತ್ತಾರೆ. ಇದು ಸತತ ಸುಮಾರು ವರ್ಷಗಳ ಕಾಲ ಹೋರಾಟ ನಡೆಯುತ್ತದೆ. ವಿಚ್ಚೇದನ ತೆಗೆದುಕೊಂಡ ಮೇಲೆ ಚೇತನ ಅವರು ಒಂದು ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಈ ಟ್ರಾವೆಲ್ಸ್ ಕಂಪನಿಗೆ ಒಮ್ಮೆ ಅನಿಲ್ ಕುಂಬ್ಳೆ ಅವರು ಭೇಟಿ ಮಾಡುತ್ತಾರೆ. ಇವರಿಬ್ಬರ ಪರಿಚಯ ಸ್ನೇಹವಾಗುತ್ತದೆ.

Astro

ನಂತರ ಅನಿಲ್ ಕುಂಬ್ಳೆ ಅವರಿಗೆ ಚೇತನ ಅವರ ಜೀವನದಲ್ಲಿ ಏನಾಯಿತು ಎಂಬುದು ಗೊತ್ತಾಗುತ್ತದೆ. ತದನಂತರ ಅವರಿಗೆ ಒಂದು ಒಳ್ಳೆಯ ಭವಿಷ್ಯವನ್ನು ಕೊಡಬೇಕು ಎಂದು ಅವರನ್ನು ಮದುವೆಯಾಗಬೇಕೆಂದು ನಿರ್ಧಾರ ಮಾಡುತ್ತಾರೆ. ಇದನ್ನು ಚೇತನ ಅವರ ಬಳಿ ಹೇಳಿದಾಗ ಒಪ್ಪಿಕೊಳ್ಳುವುದಿಲ್ಲ. ನನಗೆ ಯಾವುದೇ ಮದುವೆ ಬೇಡ ಈಗಾಗಲೇ ಒಂದು ಸಂಸಾರದಿಂದ ನನ್ನ ಜೀವನವು ಹಾಳಾಗಿದೆ ಎಂದು ಒಪ್ಪಿಕೊಳ್ಳುವುದಿಲ್ಲ.

ಆದರೆ ಅನಿಲ್ ಕುಂಬ್ಳೆ ಅವರು ಮಾತ್ರ ಇದಕ್ಕೆ ಹಠ ಬಿದ್ದು ಅವರನ್ನು ಅಂತಿಮವಾಗಿ ಮದುವೆಗೆ ಒಪ್ಪಿಸುತ್ತಾರೆ. ನಂತರ ಇಬ್ಬರೂ ಮದುವೆಯಾಗುತ್ತಾರೆ. ಮದುವೆಯಾದ ನಂತರವೂ ಕೂಡ ತಮ್ಮ ಮಗಳಿಗಾಗಿ ಹೋರಾಟವನ್ನು ನಡೆಸುತ್ತಾರೆ. ಸುಮಾರು ವರ್ಷಗಳು ಆದಮೇಲೆ ಚೇತನಾ ಅವರ ಬಳಿ ತಮ್ಮ ಮಗಳು ಇರುವುದಕ್ಕೆ ನ್ಯಾಯಾಲಯವು ತೀರ್ಪು ಕೊಡುತ್ತದೆ.

ಇನ್ನು ಅನಿಲ್ ಕುಂಬ್ಳೆ ಅವರಿಗೆ ಇಬ್ಬರು ಮಕ್ಕಳು. ಇಬ್ಬರು ಮಕ್ಕಳ ಜೊತೆಗೆ ಅರುಣಿ ಸೇರಿ ಮೂವರು ಮಕ್ಕಳು ಇದ್ದಾರೆ. ಇದರಲ್ಲಿ ಮಕ್ಕಳ ವಿಚಾರಕ್ಕೆ ಬಂದರೆ ಅನಿಲ್ ಕುಂಬ್ಳೆ ಅವರು ಯಾವಾಗಲೂ ಅವರ ಪತ್ನಿಯ ಮೊದಲ ಪತಿಯ ಮಗಳಾದ ಅರುಣಿ ಅವರ ಹೆಸರನ್ನು ಹೇಳುತ್ತಾರೆ. ಇನ್ನೂ ಅರುಣಿ ಅವರಿಗೆ ವಿದೇಶದಲ್ಲಿ ಶಿಕ್ಷಣವನ್ನು ಕೂಡ ಕೊಡಿಸುತ್ತಿದ್ದಾರೆ. ಇದನ್ನು ಕೇಳಿದರೆ ಅನಿಲ್ ಕುಂಬ್ಳೆ ಅವರ ಮನಸ್ಸು ಎಂತಹದ್ದು ಎಂದು ಗೊತ್ತಾಗುತ್ತದೆ ಮತ್ತು ಇವರ ಮೇಲೆ ಸಾಕಷ್ಟು ಹೆಮ್ಮೆ ಕೂಡ ಅನಿಸುತ್ತದೆ…..

Leave A Reply