ಅನಿರುದ್ ಬಿಟ್ಟ ನಂತರ ಜೊತೆ ಜೊತೆಯಲಿ ಸೀರಿಯಲ್ ರೇಟಿಂಗ್ ಕಥೆ ಏನಾಯ್ತು ಗೊತ್ತಾ? ಶಾಕ್ ಆದ ಧಾರಾವಾಹಿ ತಂಡ!! ಸದ್ಯಕ್ಕೆ ನಂಬರ್ ಒನ್ ಧಾರಾವಾಹಿ ಯಾವುದು ಗೊತ್ತೇ ??
ಸ್ನೇಹಿತರೆ, ಜೊತೆ ಜೊತೆಗೆ ಸೀರಿಯಲ್ ಎಂದರೆ ನಮ್ಮೆಲ್ಲರ ತಲೆಗೆ ತಟ್ಟಂತ ಬರುವ ಹೆಸರು ಆರ್ಯವರ್ಧನ್ ಸರ್ ಹಾಗೂ ಅನುಸಿರಿ ಮನೆ ಈ ಎರಡು ಪಾತ್ರಗಳು ಜನರ ಮನಸ್ಸನ್ನು ಬಹಳವಾಗಿ ಸೆಳೆದುಬಿಟ್ಟಿತ್ತು. ಇವರಿಬ್ಬರ ಮುಗ್ಧ ಪ್ರೀತಿ ಒಬ್ಬರಿಗೊಬ್ಬರು ಕೊಡುವಂತಹ ಗೌರವ ಎಲ್ಲವೂ ಜನರ ಮನಸ್ಸನ್ನು ಆಕ್ರಮಿಸಿ ಕೊಂಡು ಬಿಟ್ಟಿತು. ನಟ ವಿಷ್ಣುವರ್ಧನ್ ಅವರ ಅಳಿಯ ಆದಂತಹ ಅನಿರುದ್ಧ ಬಹಳ ಅದ್ಭುತವಾಗಿ ಪಾತ್ರ ಜೀವ ತುಂಬಿದರೆ ಅವರಿಗೆ ತಕ್ಕನಾದ ಅಭಿನಯವನ್ನು ನಟಿ ಮೇಘ ಶೆಟ್ಟಿ ಅವರು ಮಾಡಿದರು.
ಇವರಿಬ್ಬರ ಕಾಂಬಿನೇಷನ್ ತೆರೆಯ ಮೇಲೆ ಬಹಳ ಅದ್ಭುತವಾಗಿ ವರ್ಕ್ ಆಗಿದ್ದು ಎಂದರೆ ತಪ್ಪಾಗಲಾರದು. ಹೀಗಿರುವಾಗ ಅನಿರುದ್ದವರು ಕೆಲವು ಕಾರಣಾಂತರಗಳಿಂದಾಗಿ ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರಬಂದ ನಂತರ ಟಿ ಆರ್ ಪಿ ರೇಟಿಂಗ್ ಸ್ಥಿತಿ ಏನಾಗಿದೆ? ಅನಿರುದ್ಧ ಅವರು ಇಲ್ಲದ ಕಾರಣ ಜನ ಸೀರಿಯಲ್ ನೋಡ್ತಾ ಇಲ್ವಾ? ಇದರ ಅಸಲಿಯತೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಜೊತೆ ಜೊತೆಯಲಿ ಸೀರಿಯಲ್ ನ ಆರಂಭಿಕ ಪ್ರಸಾರದ ದಿನದಿಂದ ಹಿಡಿದು ಅನಿರುದ್ದವರು ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಂತಹ ದಿನದವರೆಗೂ ಜೊತೆ ಜೊತೆಯಲಿ ಧಾರಾವಾಹಿ ಟಿಆರ್‌ಪಿ ರೇಟಿಂಗ್ನಲ್ಲಿ ಸ್ಥಾನವನ್ನು ಅಲಂಕರಿಸಿತ್ತು. ಸೀರಿಯಲ್ ನಲ್ಲಿನ ಪ್ರತಿಯೊಂದು ಪಾತ್ರವು ಜನರ ಮನಸ್ಸನ್ನು ಅದೆಷ್ಟರ ಮಟ್ಟಿಗೆ ತಿಳಿದುಕೊಂಡಿದ್ದು ಎಂದರೆ ಪ್ರತಿಯೊಬ್ಬರೂ ಪ್ರತಿದಿನ ಬದುಕಿದರೆ ಇವರಂತೆ ಅನ್ಯೋನ್ಯತೆಯಿಂದ ಬದುಕಬೇಕು ಎಂದು ಸುಬ್ಬು, ಪುಷ್ಪ, ಅನು, ಆರ್ಯವರ್ಧನ್ ಹಾಗೂ ಜೈಂಡೆ ಅವರ ಹೆಸರು ಹೇಳುತ್ತಿದ್ದರು.
ಇಷ್ಟರ ಮಟ್ಟಿಗೆ ಈ ಧಾರಾವಾಹಿಯು ಜನರ ಮನಸ್ಸನ್ನು ಆಕ್ರಮಿಸಿಕೊಂಡಿತ್ತು. ಜೊತೆ ಜೊತೆಯಲಿ ಸೀರಿಯಲ್ ನಿಂದ ಅನಿರುದ್ಧ ಅವರು ಹೊರ ನಡೆದ ಬೆನ್ನಲ್ಲೇ ಹರೀಶ್ ರಾಜ್ ಅವರನ್ನು ಆರ್ಯವರ್ಧನ್ ಪಾತ್ರಕ್ಕೆ ಹಾಕಲಾಗಿದೆ. ಅನಿರುದ್ಧ ಅವರನ್ನು ಆರ್ಯವರ್ಧನ್ ಪಾತ್ರದಲ್ಲಿ ನೋಡಿ ಇಷ್ಟಪಟ್ಟಂತಹ ಜನ ಅದೇ ಪ್ರೀತಿಯನ್ನು ಇವರಿಗೆ ನೀಡುತ್ತಿಲ್ಲ. ಹೌದು ಗೆಳೆಯರೇ ಅನಿರುಧವರು ಸೀರಿಯಲ್ ನಿಂದ ಹೊರ ಹೋದ ಬೆನ್ನೆಲೆ ಜೊತೆ ಜೊತೆಯಲಿ ಸೀರಿಯಲ್ ಮೂಲೆಗುಂಪಾಗಿದೆ.
ಇನ್ನು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಎಸ್ ನಾರಾಯಣ್ ನಿರ್ದೇಶನದ ಅನಿರುದ್ಧ ನಟನೆಯ ಸೂರ್ಯವಂಶ ಧಾರಾವಾಹಿ ಮೆಲ್ಲಮೆಲ್ಲಗೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ನಿಮ್ಮ ಪ್ರಕಾರ ನಟ ಅನಿರುದ್ಧ ಹಾಗೂ ನಟ ಹರೀಶ್ ರಾಜ್ ಇಬ್ಬರಲ್ಲಿ ಆರ್ಯವರ್ಧನ್ ಪಾತ್ರಕ್ಕೆ ಸರಿ ಹೊಂದುವವರು ಯಾರು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ. ಮತ್ತು ಸದ್ಯಕ್ಕೆ ಹಿಟ್ಲರ್ ಕಲ್ಯಾಣ ಎಂಬುವ ಸೀರಿಯಲ್ ನಂಬರ್ ಒನ್ ಸ್ಥಾನದಲ್ಲಿದೆ ಇದೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿವೆ !!