Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಅದ್ಧೂರಿಯಾಗಿ ನಡೆದ ರಾಧ ರಮಣ ಸೀರಿಯಲ್ ಸ್ಕಂದ ಅಶೋಕ್ ಮನೆಯ ಗೃಹಪ್ರವೇಶ..!!

0

ಕನ್ನಡದ ಖ್ಯಾತ ನಟ ಮತ್ತು ರಾಧಾ ರಮಣ ಸೀರಿಯಲ್ ನ ನಾಯಕ ಸ್ಕಂದ ಅಶೋಕ್ ಅವರು ಏಪ್ರಿಲ್ 26 1986 ರಂದು ಚಿಕ್ಕಮಗಳೂರಿನಲ್ಲಿ ಜನಿಸಿದ್ದಾರೆ. ಇವರು ಕಿರುತೆರೆಯಲ್ಲೂ ನಟಿಸುವುದರ ಜೊತೆಗೆ ಕನ್ನಡ ಮಲಯಾಳಂ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಸ್ಕಂದ ಅಶೋಕ್ ಅವರು 2006 ರಲ್ಲಿ ಮಲಯಾಳಂನ ನೋಟ್ಬುಕ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

ಈ ಚಿತ್ರವನ್ನು ರೋಶನ್ ಆ್ಯಂಡ್ರೂಸ್ ಅವರು ನಿರ್ದೇಶನ ಮಾಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ನೋಡುವುದಾದರೆ 2012 ರಲ್ಲಿ ಚಾರುಲತಾ ಎನ್ನುವ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ತಮಿಳಿನಲ್ಲಿ ಕೂಡ ಬಿಡುಗಡೆಯಾಯಿತು. ಇದಾದ ಮೇಲೆ 2016 ರಲ್ಲಿ ಬಿಡುಗಡೆಯಾದ ಯೂ ಟರ್ನ್ ಚಿತ್ರದಲ್ಲಿ ನಟಿಸಿದ್ದಾರೆ.

ತದನಂತರ ಕಾನೂರಾಯಣ, ಜಿಗರಿ ದೋಸ್ತ್, ದೇವಯಾನಿ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇದಿಷ್ಟು ಬೆಳ್ಳಿತೆರೆಯ ವಿಷಯವಾದರೆ ಈಗ ಕಿರುತೆರೆಯ ಸಮಾಚಾರಕ್ಕೆ ಬರೋಣ. ಇವರು 2016 ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮೊದಲನೆಯದಾಗಿ ನಟಿಸಿದ್ದಾರೆ.
ಇದರಲ್ಲಿ ರಮಣ್ ಎನ್ನುವ ಪಾತ್ರದಲ್ಲಿ ಸಿದ್ಧಾರ್ಥ್ ಸ್ನೇಹಿತರಾಗಿ ಅಭಿನಯ ಮಾಡಿದ್ದಾರೆ.

ತದನಂತರ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕೂಡ ನಟಿಸಿ ತುಂಬಾ ಜನಪ್ರಿಯರಾದರು. ಇದಾದ ಮೇಲೆ ರಾಧಾ ರಮಣ ಧಾರಾವಾಹಿಯಲ್ಲಿ ಮುಖ್ಯ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ಸರಸು ಧಾರಾವಾಹಿಯಲ್ಲಿ ಕೂಡ ನಟಿಸಿ ಪ್ರಸ್ತುತ ಇವರು ಸತ್ಯ ಮತ್ತು ರಾಧೆಶ್ಯಾಮ್ ಎನ್ನುವ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸ್ಕಂದ ಅಶೋಕ್ ಅವರು 2018 ರಲ್ಲಿ ಶಿಕಾ ಪ್ರಸಾದ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.

ಇವರು ಇತ್ತೀಚೆಗಷ್ಟೇ ತಮ್ಮ ಮನೆಯ ಗೃಹಪ್ರವೇಶವನ್ನು ತುಂಬ ಅದ್ದೂರಿಯಾಗಿ ಮಾಡಿದ್ದಾರೆ. ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಮನೆಯಲ್ಲಿ ಮಾಡಿರುವ ಅಲಂಕಾರ ಪೂಜೆ ಊಟದ ವ್ಯವಸ್ಥೆ ಎಲ್ಲವೂ ಕೂಡ ತುಂಬ ಅದ್ದೂರಿಯಾಗಿ ಇತ್ತು.

ಅದರ ವೀಡಿಯೊವನ್ನು ಇಲ್ಲಿ ನೀವು ನೋಡಬಹುದು. ಇವರ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಸಾಕಷ್ಟು ಕಲಾವಿದರು ಬಂದಿದ್ದರು ಜೊತೆಗೆ ರಾಧ ರಮಣ ಸೀರಿಯಲ್ ನಲ್ಲಿ ನಟಿಸಿದ್ದ ಕಾವ್ಯಾ ಗೌಡ ಮತ್ತು ಸುಜಾತ ಅವರು ಕೂಡ ಪಾಲ್ಗೊಂಡಿದ್ದರು…..

Leave A Reply