ಅಜ್ಜಿಯ ಹುಟ್ಟುಹಬ್ಬವನ್ನು ಆಚರಿಸಿದ ನಟಿ ತಾರಾ ಮಗ..!! ಸಿಕ್ಕಾಪಟ್ಟೆ ವೈರಲ್ ಆದ ಈ ಮುದ್ದಾದ ವಿಡಿಯೋವನ್ನು ನೀವು ಒಮ್ಮೆ ನೋಡಿ !!
ಕನ್ನಡದ ಖ್ಯಾತ ನಟಿ ತಾರಾ ಅವರ ಮಗ ಆಗಿರುವ ಶ್ರೀ ಕೃಷ್ಣ ಅವರು ತಾರಾ ಅವರ ಜೊತೆಗೆ ಅವರ ತಾಯಿಯಾದ ಪುಷ್ಪಾ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ತನ್ನ ತಾಯ ಹುಟ್ಟುಹಬ್ಬವನ್ನು ಆಚರಿಸಿದ ವೀಡಿಯೋವನ್ನು ತಾರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ
ಇನ್ನೂ ನಟಿ ತಾರಾ ಅವರ ಮೊದಲಿನ ಹೆಸರು ಅನುರಾಧ. ಇವರು ಮಾರ್ಚ್ 4 1973 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ತ್ಯಾಗರಾಜು ಎಂದು. ಇನ್ನು ತಾರಾ ಅವರು ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಕೆಲ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ.
ತಾರಾ ಅವರು 1984 ರಲ್ಲಿ ತಮಿಳಿನ ಎಂಗೆಯುಮ್ ಒರು ಗಂಗೈ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಸಿನಿಮಾ ರಂಗಕ್ಕೆ ತಮ್ಮ ಪಾದಾರ್ಪಣೆಯನ್ನು ಮಾಡಿದರು. ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 1985 ರಲ್ಲಿ ತುಳಸಿದಳ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದರು.
ತದನಂತರ ಮನೆಯೇ ಮಂತ್ರಾಲಯ, ಸುಂದರ ಸ್ವಪ್ನಗಳು, ಶುಭಮಿಲನ, ಅವಳೇ ನನ್ನ ಹೆಂಡತಿ, ಪೋಲಿ ಹುಡುಗ, ಸಿ.ಬಿ.ಐ ಶಂಕರ್, ರಾಜಾ ಕೆಂಪು ರೋಜಾ, ಅರಣ್ಯದಲ್ಲಿ ಅಭಿಮನ್ಯು, ಉಂಡು ಹೋದ ಕೊಂಡು ಹೋದ, ಹಳ್ಳಿಮೇಷ್ಟ್ರು, ಬೆಳ್ಳಿ ಕಾಲುಂಗುರ, ನಗರದಲ್ಲಿ ನಾಯಕರು, ವಜ್ರಾಯುಧ, ಗಂಧದಗುಡಿ ಪಾರ್ಟ್ 2, ಪ್ಯಾರಿಸ್ ಪ್ರಣಯ, ಒಂದಾಗೋಣ ಬಾ, ಸೈನೇಡ್, ಕಿರಾತಕ, ಕೆಂಪೇಗೌಡ, ಗಲಾಟೆ, ಶ್ರಾವಣಿ ಸುಬ್ರಹ್ಮಣ್ಯ, ಭರ್ಜರಿ, ಅಥರ್ವ, ಸಿಂಗ, ಶಿವಾರ್ಜುನ, ಬಡವ ರಾಸ್ಕಲ್ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ತಾರಾ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತ್ಯುತ್ತಮ ಕಾರ್ಯಕ್ರಮವಾಗಿದ್ದ ರಾಜಾರಾಣಿ ಶೋಗೆ ಜಡ್ಜ್ ಕೂಡ ಆಗಿದ್ದರು. ಪ್ರಸ್ತುತ ನಟಿ ತಾರಾ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಶೋ ಗೆ ಕೂಡ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾರಾ ಅವರು 2005 ರಲ್ಲಿ ಸಿನಿಮಾಟೋಗ್ರಾಫರ್ ಆಗಿರುವ ಹೆಚ್ ಸಿ ವೇಣು ಗೋಪಾಲ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಾರಾ ಅವರು ಪ್ರಸ್ತುತ ಕರ್ನಾಟಕ ಲೆಜಿಸ್ಲೇಟಿವ್ ಕೌನ್ಸಿಲ್ ನಲ್ಲಿ ಮೆಂಬರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ……