ತಮಿಳು ಖ್ಯಾತ ನಟ ಮುರಳಿ ಅವರು ಮೇ 19 1964 ರಂದು ಬೆಂಗಳೂರಿನಲ್ಲಿ ಜನಿಸಿದರು. ಇನ್ನು ಇವರ ತಂದೆಯ ಹೆಸರು ಎಸ್ ಸಿದ್ದಲಿಂಗಯ್ಯ. ಇವರು ಕೂಡ ಆಗಿನ ಕಾಲದಲ್ಲಿ ಫೇಮಸ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಇನ್ನು ಮುರಳಿ ಅವರ ತಾಯಿಯ ಹೆಸರು ಧನಲಕ್ಷ್ಮಿ ಎಂದು.
ನಟ ಮುರಳಿ ಅವರ ಸಿನಿಮಾ ವಿಷಯಕ್ಕೆ ಬಂದರೆ ಮುರಳಿ ಅವರು ಮೊದಲನೆಯದಾಗಿ 1982 ರಲ್ಲಿ ಕನ್ನಡದಲ್ಲಿ ಗೆಲುವಿನ ಹೆಜ್ಜೆ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿ ಕೆರಿಯರನ್ನು ಶುರು ಮಾಡಿಕೊಂಡರು. ಇದಾದ ಮೇಲೆ ಪ್ರೇಮ ಪರ್ವ, ಬಿಳಿ ಗುಲಾಬಿ, ಪ್ರೇಮ ಗಂಗೆ, ತಾಯಿ ಕೊಟ್ಟ ತಾಳಿ, ಸಂಭವಾಮಿ ಯುಗೆ ಯುಗೆ, ಪದ್ಮವ್ಯೂಹ , ಅಜಯ್ ವಿಜಯ್ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇದರಲ್ಲಿ ಮುರಳಿ ಅವರು ನಟಿಸಿದ ಅಜಯ್ ವಿಜಯ್ ಫಿಲಂ ಅಂತೂ ಸೂಪರ್ ಡೂಪರ್ ಹಿಟ್ಟೆಂದು ಹೇಳಬಹುದು. ಇನ್ನು ಉಳಿದ ಸಾಕಷ್ಟು ಸಿನಿಮಾಗಳನ್ನು ಮುರಳಿ ಅವರು ತಮಿಳು ಭಾಷೆಗಳಲ್ಲಿ ನಟಿಸಿ ಆಗಿನ ಕಾಲದಲ್ಲಿ ತಮಿಳು ನಟರಲ್ಲಿ ನಂಬರ್ ವನ್ ಆಗಿ ಗುರುತಿಸಿಕೊಂಡಿದ್ದರು. ಇನ್ನು ಇವರ ತಂದೆ ಸಿದ್ದಲಿಂಗಯ್ಯ ಅವರು ಕೂಡ ಸಾಕಷ್ಟು ತಮಿಳು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಇನ್ನು ಮುರಳಿ ಅವರು 1987 ರಲ್ಲಿ ಶೋಭಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದರು. ಇವರಿಗೆ ಅಥರ್ವ ಕಾವ್ಯ ಮತ್ತು ಆಕಾಶ್ ಎನ್ನುವ ಮೂರು ಜನ ಮಕ್ಕಳಿದ್ದಾರೆ. ಇದರಲ್ಲಿ ಅಥರ್ವ ಅವರು ಕೂಡ ತಮಿಳು ಮತ್ತು ಕನ್ನಡ ನಟರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ದುರದೃಷ್ಟವಶಾತ್ ಮುರಳಿ ಅವರು ಕೇವಲ ಚಿಕ್ಕ ವಯಸ್ಸಿನಲ್ಲಿಯೇ ಕೆಲ ಅನಾರೋಗ್ಯ ಸಮಸ್ಯೆಗಳಿಂದ ಸೆಪ್ಟೆಂಬರ್ 2010 ರಲ್ಲಿ ಚೆನ್ನೈನಲ್ಲಿ ಮರಣ ಹೊಂದಿದರು.
ಇನ್ನು ಇವರ ಮಗ ಅಥರ್ವ ಅವರು ಕೇವಲ ನಟ ಮಾತ್ರರಲ್ಲ ಸಿನಿಮಾ ನಿರ್ಮಾಪಕ ಕೂಡ ಹೌದು. ಇವರು ಮೇ 7 1989 ರಲ್ಲಿ ಜನಿಸಿದ್ದಾರೆ. ಇನ್ನೂ ಇವರು ಮೊದಲನೆಯದಾಗಿ ಬಾನಾ ಕತದಿ ಸಿನಿಮಾದ ಮೂಲಕ ತಮ್ಮ ಆಕ್ಟಿಂಗ್ ಕೆರಿಯರನ್ನು ಶುರು ಮಾಡಿಕೊಂಡರು. ಇಲ್ಲಿ ಮುರಳಿ ಅವರ ಮಗ ಅಥರ್ವ ಹೇಗಿದ್ದಾರೆ ಎನ್ನುವ ಕೆಲ ದೃಶ್ಯಗಳಿಂದ ನೋಡಬಹುದು…..