ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ನಟಿ ಐಶ್ವರ್ಯಾ ಸಾಲಿಮಠ್ ಅವರು ತನು ಪಾತ್ರದಲ್ಲಿ ತುಂಬಾ ಸೊಗಸಾಗಿ ಅಭಿನಯ ಮಾಡಿದ್ದಾರೆ. ಇನ್ನೂ ಅಗ್ನಿಸಾಕ್ಷಿ ಧಾರಾವಾಹಿಯು ಡಿಸೆಂಬರ್ 2 2013 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದು ಇದು ಒಟ್ಟಾರೆ 6 ವರ್ಷಗಳ ಕಾಲ ಓಡಿ ಜನಪ್ರಿಯ ಧಾರಾವಾಹಿಯಾಗಿ ಗುರುತಿಸಿಕೊಂಡಿದೆ.
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಮತ್ತು ವಿಜಯ್ ಸೂರ್ಯ ಅವರು ಮುಖ್ಯವಾದ ಪಾತ್ರಗಳಲ್ಲಿ ನಟಿಸಿದ್ದು ಇವರುಗಳ ಜೊತೆಗೆ ಆರ್ ಮಂಜುನಾಥ್, ಮುಖ್ಯಮಂತ್ರಿ ಚಂದ್ರು, ಪ್ರಿಯಾಂಕ ಎಸ್, ಸುಕೃತಾ ನಾಗ್, ರಾಜೇಶ್, ಧ್ರುವ, ಐಶ್ವರ್ಯಾ ಸಾಲಿಮಠ್, ಚಂದನಾ, ಅಮಿತ್ ರಾವ್, ಅನುಷಾ ರಾವ್, ನಾಗಾರ್ಜುನ್ ಇನ್ನೂ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.
ಇವರು ಇತ್ತೀಚೆಗೆ ಅಷ್ಟೇ ನಟ ವಿನಯ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಹೌದು ಇವರಿಬ್ಬರು ಕೆಲ ವರ್ಷಗಳ ಕಾಲ ಪ್ರೀತಿಸಿ ಈಗ ಅದ್ದೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ. ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ವಿಷಯವನ್ನು ಹಂಚಿಕೊಂಡಿದ್ದರು.
ಇನ್ನು ಇದೀಗ ಐಶ್ವರ್ಯ ಮತ್ತು ವಿನಯ್ ಅವರು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಗೆ ಐಶ್ವರ್ಯಾ ಸಾಲಿಮಠ್ ಅವರು ಮಾರ್ಚ್ 25 1991 ರಂದು ಧಾರವಾಡದಲ್ಲಿ ಜನಿಸಿದ್ದಾರೆ. ಇನ್ನು ಐಶ್ವರ್ಯಾ ಅವರು ಧಾರವಾಡದಲ್ಲಿರುವ ಸೇಂಟ್ ಜೋಸೆಫ್ ಹೈಸ್ಕೂಲ್ ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ ಅಲ್ಲೇ ಜೆ.ಎಸ್.ಎಸ್ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಕೂಡ ಮಾಡಿ ಮುಗಿಸಿದ್ದಾರೆ.
ಐಶ್ವರ್ಯಾ ಅವರು ಮಹಾಸತಿ ಎನ್ನುವ ಧಾರಾವಾಹಿಯಲ್ಲಿ ಮೊದಲನೆಯದಾಗಿ ನಟಿಸಿದ್ದಾರೆ. ಇದರಲ್ಲಿ ವಿನಯ್ ಅವರು ಕೂಡ ಅಭಿನಯ ಮಾಡಿದ್ದಾರೆ. ಇವರಿಬ್ಬರು ಜೊತೆಯಾಗಿ ನಟಿಸಿ ಬಹುಕಾಲದ ಸ್ನೇಹಿತರಾಗಿದ್ದರು. ನಂತರ ಅದು ಪ್ರೀತಿಗೆ ಬದಲಾಗಿ ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಂಡಿದ್ದಾರೆ. ಐಶ್ವರ್ಯಾ ಸಾಲಿಮಠ್ ಮತ್ತು ವಿನಯ್ ಅವರ ಮದುವೆಯ ಕೆಲ ಸುಂದರ ಕ್ಷಣಗಳನ್ನು ನೀವು ನೋಡಬಹುದು…..