Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

NSC Scheme : ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು, FD ಗಿಂತ ಜಾಸ್ತಿ ಬಡ್ಡಿ ನಿಮ್ಮ ಕೈಗೆ

NSC Scheme: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಆಗಿದೆ. ಸಾಮಾನ್ಯ ಜನರು ಉಳಿತಾಯ ಮಾಡುವುದಕ್ಕೆ ಇದು ಒಳ್ಳೆಯ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ಉಳಿತಾಯ ಮಾಡಿದರೆ ನಿಮ್ಮ ಹಣಕ್ಕೆ ಭದ್ರತೆ ಹಾಗೂ ಒಳ್ಳೆಯ ಬಡ್ಡಿ ಸಿಗುತ್ತದೆ.

NSC Scheme : ಹೂಡಿಕೆ ಮಾಡಲು ಬಯಸುವವರಿಗೆ ಅತ್ಯುತ್ತಮವಾದ ಆಯ್ಕೆ ಪೋಸ್ಟ್ ಆಫೀಸ್, ಯಾಕೆಂದರೆ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದರೆ ನಿಮಗೆ ಒಳ್ಳೆಯ ಆದಾಯ ಸಿಗುತ್ತದೆ ಜೊತೆಗೆ ನಿಮ್ಮ ಹಣಕ್ಕೆ ಭದ್ರತೆ ಕೂಡ ಇರುತ್ತದೆ. ಬ್ಯಾಂಕ್ FD ಗಿಂತ ಉತ್ತಮ ಆದಾಯ ಗಳಿಸುತ್ತೀರಿ. ದೀರ್ಘವಧಿಯ ಹೂಡಿಕೆಗೆ ಇದು ಅತ್ಯುತ್ತಮವಾದ ಆಯ್ಕೆ ಆಗಿದೆ. ನೀವು ಹೂಡಿಕೆ ಮಾಡಲು ಬಯಸಿದರೆ ಪೋಸ್ಟ್ ಆಫೀಸ್ ನಲ್ಲಿ ಅನೇಕ ಆಯ್ಕೆಗಳಿವೆ.

ಪೋಸ್ಟ್ ಆಫೀಸ್ ಟೈಮ್ ಸೇವಿಂಗ್ಸ್ ಸ್ಕೀಮ್, ಸೇರಿದಂತೆ ಹೂಡಿಕೆಗೆ ಉಳಿತಾಯಕ್ಕೆ ಬಹಳಷ್ಟು ಯೋಜನೆಗಳು ಮತ್ತು ಆಯ್ಕೆಗಳು ಇದೆ. ಅವುಗಳಲ್ಲಿ ಒಂದು ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ, ಇಂದು ನಾವು ನಿಮಗೆ ತಿಳಿಸುತ್ತಿರುವುದು NSC ಸ್ಕೀಮ್ ಬಗ್ಗೆ. ಇಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಏನೆಲ್ಲಾ ಲಾಭ ಸಿಗುತ್ತದೆ ಎಂದು ತಿಳಿಸಿಕೊಡುತ್ತೇವೆ ನೋಡಿ..

NSC Scheme

ಇದು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಆಗಿದೆ. ಸಾಮಾನ್ಯ ಜನರು ಉಳಿತಾಯ ಮಾಡುವುದಕ್ಕೆ ಇದು ಒಳ್ಳೆಯ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ಉಳಿತಾಯ ಮಾಡಿದರೆ ನಿಮ್ಮ ಹಣಕ್ಕೆ ಭದ್ರತೆ ಹಾಗೂ ಒಳ್ಳೆಯ ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಸರ್ಕಾರವು ಪ್ರತಿ ತ್ರೈಮಾಸಿಕಕ್ಕೆ ಬಡ್ಡಿ ದರವನ್ನು ಲೆಕ್ಕ ಹಾಕುತ್ತದೆ.

Also Read: Amritbaal Policy : ಅಮೃತಬಾಲ್ ಪಾಲಿಸಿ ಪರಿಚಯಿಸಿದ LIC, 73 ಸಾವಿರ ಪ್ರೀಮಿಯಂ ಪಾವತಿಸಿದರೆ ಭಾರಿ ಲಾಭ!

NSC ಸ್ಕೀಮ್ ಬಡ್ಡಿದರ:

NSC ಸ್ಕೀಮ್ ನಲ್ಲಿ ನೀವು ಹೂಡಿಕೆ ಮಾಡುವ ಹಣಕ್ಕೆ 7.7% ಬಡ್ಡಿದರ ಸಿಗುತ್ತದೆ. ಇದು ನಿಮಗೆ ಒಳ್ಳೆಯ ಲಾಭ ನೀಡುವುದರ ಜೊತೆಗೆ ಇಲ್ಲಿ ನಿಮಗೆ ಸಿಗುವ ಬಡ್ಡಿ ಹಣಕ್ಕೆ ತೆರಿಗೆ ವಿನಾಯಿತಿ ಕೂಡ ಇರುತ್ತದೆ. ಹೂಡಿಕೆ ಮಾಡುವವರು ಒಂದು ವರ್ಷಕ್ಕೆ 1.5 ಲಕ್ಷ ಹೂಡಿಕೆ ಮಾಡಿದರೆ, ತೆರಿಗೆ ವಿನಾಯಿತಿ ಪ್ರಯೋಜನ ಸಿಗುತ್ತದೆ.

ಲಾಕಿನ್ ಅವಧಿ :-

ಈ ಯೋಜನೆಯ ಲಾಕಿನ್ ಅವಧಿ ಎಷ್ಟು ಎಂದು ನೋಡುವುದಾದರೆ, ಇದು 5 ವರ್ಶಗಳ ಲಾಕಿನ್ ಅವಧಿ ಹೊಂದಿದ್ದು, ಖಾತೆ ತೆರೆದು 1 ವರ್ಷದ ಒಳಗೆ ಕ್ಲೋಸ್ ಮಾಡಿದರೆ, ನಿಮಗೆ ಬಡ್ಡಿ ಸಿಗುವುದಿಲ್ಲ. ಹೂಡಿಕೆ ಮಾಡಿದ ಹಣ ಮಾತ್ರ ಕೊಡಲಾಗುತ್ತದೆ.

ಹೆಚ್ಚಿನ ಬಡ್ಡಿ:

ಬ್ಯಾಂಕ್ ನಲ್ಲಿ 5 ವರ್ಷಕ್ಕೆ FD ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ನಿಮಗೆ 7 ರಿಂದ 7.5% ವರೆಗು ಬಡ್ಡಿ ಸಿಗುತ್ತದೆ. ಆದರೆ ಪೋಸ್ಟ್ ಆಫೀಸ್ NSC ಯೋಜನೆಯಲ್ಲಿ 7.7% ಬಡ್ಡಿ ಸಿಗುತ್ತದೆ. ಬ್ಯಾಂಕ್ FD ಗಿಂತ ಹೂಡಿಕೆಗೆ ಒಳ್ಳೆಯ ಆಯ್ಕೆ ಇದು.

ಹೂಡಿಕೆಯ ಮಿತಿ:

ಈ ಯೋಜನೆಯಲ್ಲಿ ನೀವು ಮಿನಿಮಮ್ ₹1000 ಹೂಡಿಕೆ ಮಾಡಬಹುದು, ಮ್ಯಾಕ್ಸಿಮಮ್ ಹೂಡಿಕೆಗೆ ಮಿತಿ ನಿಗದಿ ಮಾಡಿಲ್ಲ. ಹತ್ತಿರದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ಆಫ್ಲೈನ್ ಮೂಲಕ ಅಥವಾ ಆನ್ಲೈನ್ ಮೂಲಕ ಎರಡು ರೀತಿಯಲ್ಲಿ ಈ ಯೋಜನೆಗೆ ಹೂಡಿಕೆ ಮಾಡಬಹುದು.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: SBI Savings Scheme : ಕಡಿಮೆ ಸಮಯದಲ್ಲಿ ಡಬಲ್ ರಿಟರ್ನ್ಸ್ ಕೊಡುವ ಯೋಜನೆ ತಂದಿದೆ SBI! ಹಿರಿಯರಿಗೆ ಬೆಸ್ಟ್ ಸ್ಕೀಮ್!

Leave a comment