Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Karnataka 2nd Budget 2024: ರಾಜ್ಯ ಸರ್ಕಾರದ ಎರಡನೇ ಬಜೆಟ್ ಮಂಡನೆಯಲ್ಲಿ ರೈತರಿಗಾಗಿ ಈ ಎಲ್ಲಾ ಸೌಲಭ್ಯ! ಫುಲ್ ಖುಷ್ ಆದ ದೇಶದ ಬೆನ್ನೆಲುಬು ರೈತ.

ರಾಜ್ಯ ಸರ್ಕಾರದ ಮೊದಲ ಬಜೆಟ್ ನಲ್ಲಿ ರೈತರಿಗೆ ಅನುಕೂಲ ಆಗುವ ಹಾಗೆ ಸೌಲಭ್ಯಗಳನ್ನು ತಂದಿದ್ದರು ಸಹ, ಕಳೆದ ವರ್ಷ ಸರಿಯಾಗಿ ಮಳೆ ಬೆಳೆ ಇಲ್ಲದ ಕಾರಣ ಬಹಳ ನಷ್ಟವಾಗಿದೆ.

Karnataka 2nd Budget 2024: ರಾಜ್ಯ ಸರ್ಕಾರದ ಎರಡನೇ ಬಜೆಟ್ ಮಂಡನೆ ಇದೇ ತಿಂಗಳು ನಡೆಯಲಿದೆ. ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಜಜೆಟ್ ಮಂಡನೆ ಮಾಡಲಿದ್ದಾರೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ ಈ ವರ್ಷದ ಬಜೆಟ್ ನಲ್ಲಿ ರೈತರಿಗಾಗಿ ಕೆಲವು ಸೌಲಭ್ಯಗಳನ್ನು ಜಾರಿಗೆ ತರಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇಂದಿನ ಈ ಲೇಖನದಲ್ಲಿ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ರೈತರಿಗೆ ಮತ್ತು ರೈತ ಸಂಘಗಳಿಗೆ ಎಂಎಲ್ಲಾ ಸೌಲಭ್ಯ ಸಿಗುಗ್ತದ ಎಂದು ತಿಳಿದುಕೊಳ್ಳೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ರೈತರಿಂದ ಪ್ರತಿಭಟನೆ – Karnataka 2nd Budget 2024:

ರಾಜ್ಯ ಸರ್ಕಾರದ ಮೊದಲ ಬಜೆಟ್ ನಲ್ಲಿ ರೈತರಿಗೆ ಅನುಕೂಲ ಆಗುವ ಹಾಗೆ ಸೌಲಭ್ಯಗಳನ್ನು ತಂದಿದ್ದರು ಸಹ, ಕಳೆದ ವರ್ಷ ಸರಿಯಾಗಿ ಮಳೆ ಬೆಳೆ ಇಲ್ಲದ ಕಾರಣ ಬಹಳ ನಷ್ಟವಾಗಿದೆ. ಹಾಗಾಗಿ ರೈತರು ತಮಗೆ ಸರ್ಕರದಿಂದ ಸಹಾಯ ಸಿಗಬೇಕು ಎಂದು ಪ್ರತಿಭಟನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ರೈತರಿಗೆ ಸಪೋರ್ಟ್ ಮಾಡಬೇಕು ಎನ್ನುವುದು ಅವರ ಉದ್ದೇಶ ಆಗಿದೆ..ಬಿಜೆಪಿ ಸರ್ಕಾರವು ರೈತರ ಮಕ್ಕಳಿಗಾಗಿ ರೈತ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದು, ಅದರ ಮೂಲಕ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರು. ಇನ್ನು ಪಿಎನ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ರೈತರಿಗೆ ವಾರ್ಷಿಕವಾಗಿ ₹6000 ಧನಸಹಾಯ ಸಿಗುತ್ತಿತ್ತು.

Bele Parihara Karnataka: ರೈತರಿಗೆ ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಬರ ಪರಿಹಾರ ಹಣ ನಿಮ್ಮ ಅಕೌಂಟ್ ಗೆ ಬಂದಿದ್ಯಾ? ಈ ರೀತಿ ಚೆಕ್ ಮಾಡಿ

ಬಿಜೆಪಿ ಯೋಜನೆಗಳನ್ನು ರದ್ದುಗೊಳಿಸಿದ ರಾಜ್ಯದ ಸಿಎಂ:

ರಾಜ್ಯದ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರ ಜಾರಿಗೆ ಈ ಎರಡು ಯೋಜನೆ ಹಾಗೂ ಇನ್ನಿತರ ಹಲವು ಯೋಜನೆಗಳನ್ನು ರದ್ದು ಗೊಳಿಸಿದ್ದಾರೆ..ಇದರಿಂದ ರೈತರಿಗೆ ಅನುಕೂಲ ಆಗುತ್ತಿದ್ದ ಕಾರಣ ರಾಜ್ಯ ಸರ್ಕಾರ ಮತ್ತೊಮ್ಮೆ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ರೈತ ಸಂಘಗಳು ಪ್ರತಿಭಟನೆ ನಡೆಸುತ್ತಿದೆ.

ರಾಜ್ಯ ಸರ್ಕಾರದ ವಿರುದ್ಧ ನಿಂತ ರೈತರು:

ರಾಜ್ಯ ಸರ್ಕಾರ ರೈತರಿಗೆ ಅನುಕೂಲ ಅಗುವಂಥ ಯೋಜನೆಗಳನ್ನು ರದ್ದುಪಡಿಸಿರುವುದು ರೈತರಿಗೆ ಕೂಡ ಇಷ್ಟವಾಗಿಲ್ಲ. ಹಾಗಾಗಿ ಈ ಎಲ್ಲಾ ಯೋಜನೆಗಳನ್ನು ಮತ್ತೆ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ರೈತರು ಧ್ವನಿ ಎತ್ತಿದ್ದಾರೆ.

ಸಿಎಂ ಅವರು ಹೇಳೋದೇನು?

ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಹೇಳೋದೇನು ಎಂದರೆ, ಮೊದಲ ಬಜೆಟ್ ನಲ್ಲಿ ರೈತರ ಸಾಲ ಮತ್ತು ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರು, ಎರಡನೇ ಬಜೆಟ್ ನಲ್ಲಿ ಕೂಡ ಅದನ್ನು ಮುಂದುವರೆಸಿಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದ್ದಾರೆ..ಇನ್ನು ಬಜೆಟ್ ಗೆ ಸಂಬಂಧಿಸಿದ ಹಾಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ವರ್ಷದ ಎರಡನೇ ಬಜೆಟ್ ನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಇನ್ನು ಹಲವು ಹೊಸ ಯೋಜನೆಗಳು ಜಾರಿಗೆ ಬರಬಹುದು ಎಂದು ಹೇಳಲಾಗುತ್ತಿದೆ.

Karnataka Budget 2024: ಫೆಬ್ರವರಿ 16ರಂದು ರಾಜ್ಯ ಸರ್ಕಾರದಿಂದ ಬಜೆಟ್ ಮಂಡನೆ, ಜನತೆಗೆ ಏನೆಲ್ಲಾ ಸಿಗಬಹುದು ಗೊತ್ತೇ?

ರೈತರ ಬೇಡಿಕೆಯ ಹಾಗೆ ರಾಜ್ಯ ಸರ್ಕಾರವು ಹಿಂದಿನ ಯೋಜನೆಗಳನ್ನು ಮತ್ತೆ ಜಾರಿಗೆ ತರಬಹುದು ಅಥವಾ ಹೊಸ ಯೋಜನೆಗಳನ್ನು ಘೋಷಿಸಬಹುದು ಎಂದು ಮಾಹಿತಿ ಸಿಕ್ಕಿದೆ.. ಕೆಲವು ಮೂಲ ವರದಿಗಳು ಈ ಬಗ್ಗೆ ತಿಳಿಸಿದ್ದು, ರೈತರಿಗೆ ಅನುಕೂಲ ಅಗುವಂಥ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಜಾರಿಗೆ ತರಲಿದ್ದಾರೆ ಎನ್ನಲಾಗಿದೆ. ಈ ತಿಂಗಳು ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರಾರಿಂದ ಅಧಿಕೃತವಾಗಿ ಎರಡನೇ ಬಜೆಟ್ ಮಂಡನೆ ಆಗಲಿದೆ.

ಈಗೇನೋ ವರದಿಗಳು ಈ ರೀತಿಯ ಮಾಹಿತಿ ನೀಡಿದ್ದು, ನಿಜಕ್ಕೂ ಬಜೆಟ್ ಮಂಡನೆ ಆದ ನಂತರ ರೈತರಿಗೆ ಏನೆಲ್ಲಾ ಯೋಜನೆಗಳು, ಅನುಕೂಲಗಳನ್ನು ಸರ್ಕಾರ ಜಾರಿಗೆ ತರುತ್ತದೆ, ಅದರಿಂದ ರೈತರಿಗೆ ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ ಎಂದು ಕಾದು ನೋಡಬೇಕಿದೆ.

Karnataka 2nd Budget 2024: All these facilities for farmers are in the state government’s second budget presentation!

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment