ಇಂದಿನ ದಿನ ಈ ರಾಶಿಚಕ್ರದವರ ಜೀವನದಲ್ಲಿ ಹೊಸ ತಿರುವು! ನಿಮ್ಮ ರಾಶಿಫಲ ಹೇಗಿದೆ ಒಮ್ಮೆ ನೀವೇ ನೋಡಿ!….
Today marks a new turning point in the life of this zodiac sign! See for yourself what your horoscope looks like!
ಇಂದು ಸೋಮವಾರ, ಜುಲೈ 24/07/23, ಯಾವ ರಾಶಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂಬುದನ್ನು ತಿಳಿಸುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ..
ಮೇಷ ರಾಶಿ: ನಿಮ್ಮ ನೇರ ಮಾತುಗಳಿಂದ ನೀವು ನಿಮ್ಮ ಸ್ನೇಹಿತರ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ ಇದೆ. ಇಂದಿನ ದಿನ ನಿಮಗೆ ಹಣದ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಆದರೆ ನಿಮ್ಮ ಬಳಿ ಹಣ ಇರುವುದಿಲ್ಲ. ಇಂದಿನ ದಿನ ನೀವು ನಿಮ್ಮ ಸಂಗಾತಿಯ ಜೊತೆಗೆ ಜಗಳವಾಡುವ ಸಾಧ್ಯತೆ ಹೆಚ್ಚಿದೆ. ಧಾರ್ಮಿಕ ಕಾರ್ಯಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಮನಸ್ಸಿಗೆ ಕೊಂಚ ನೆಮ್ಮದಿ ದೊರೆಯಲಿದೆ.
ವೃಷಭ ರಾಶಿ: ನೀವು ಮಾಡುವ ಕೆಲಸಗಳಲ್ಲಿ ತೊಂದರೆಗಳು ಎದುರಾಗಬಹುದು ಆದರೆ ಧೈರ್ಯದಿಂದ ಎಲ್ಲವನ್ನೂ ಎದುರಿಸಿ. ನಿಮ್ಮ ನಿರ್ಧಾರಗಳನ್ನು ಬೇರೆಯವರ ಮಾತುಗಳನ್ನು ಕೇಳಿ ಬದಲಾಯಿಸ ಬೇಡಿ. ನಿಮಗಾಗಿ ಕೊಂಚ ಸಮಯ ತೆಗೆದುಕೊಳ್ಳಲು ಪ್ರಯತ್ನಿಸಿ. ನಿಮ್ಮ ವೈವಾಹಿಕ ಜೀವನ ಬಹಳ ಸಂತೋಷವಾಗಿರಲಿದೆ.
ಮಿಥುನ ರಾಶಿ: ನಿಮ್ಮ ಮೇಲೆ ಯಾವುದೇ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬೇಡಿ. ನಿಮ್ಮ ಮೇಲೆ ನೀವು ನಂಬಿಕೆ ಇಟ್ಟು ಕೆಲಸ ಮಾಡಿ, ಕೊಂಚ ಕಷ್ಟವಾದರೂ ಸಹ ಒಳ್ಳೆಯ ಫಲವನ್ನು ಕಾಣಲಿದ್ದೀರಿ. ಇಂದು ನೀವು ಯಾರ ಸಹಾಯ ಪಡೆಯದೆ ಹಣ ಸಂಪಾದಿಸಿಲಿದ್ದೀರಿ. ನಿಮ್ಮ ಕುಟುಂಬಸ್ಥರ ಅಗತ್ಯಗಳನ್ನು ಪೂರೈಸಲು ಇಂದು ಪ್ರಯತ್ನಿಸಿ.
ಕರ್ಕಾಟಕ ರಾಶಿ: ಇಂದಿನ ದಿನ ನಿಮ್ಮ ಹಾಗೂ ನಿಮ್ಮ ಕುಟುಂಬಸ್ಥರ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸಿ. ನೀವು ಇಂದು ನಿಮ್ಮ ವರಟು ಮಾತುಗಳಿಂದ ನಿಮ್ಮ ಮನೆಯವರಿಗೆ ನೋವುಂಟು ಮಾಡುವ ಸಾಧ್ಯತೆ ಇದೆ. ಕೊಂಚ ನಿಮ್ಮ ಮಾತಿನ ಮೇಲೆ ನಿಗಾ ಇರಿಸಿ. ಇನ್ನು ವಾಹನ ಚಲಿಸುವಾಗ ಕೊಂಚ ಜಾಗರೂಕತೆಯಿಂದ ಚಲಿಸುವುದು ಉತ್ತಮ.
ಸಿಂಹ ರಾಶಿ: ಇಂದಿನ ದಿನ ಸಿಂಹ ರಾಶಿಯವರು ಹಣಕಾಸಿನ ವಿಷಯದಲ್ಲಿ ಲಾಭ ಪಡೆಯಲಿದ್ದಾರೆ. ಇನ್ನು ಧಾನ ಮಾಡುವ ಮೂಲಕ ನಿಮ್ಮ ಮನಸ್ಸಿಗೆ ಕೊಂಚ ಶಾಂತಿ ಸಿಗಲಿದೆ. ಅನಗತ್ಯವಾಗಿ ಯಾರ ಜೊತೆಗೂ ವಾದಕ್ಕೆ ಇಳಿಯಬೇಡಿ. ಇದರಿಂದ ಕೇವಲ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಕೆಲಸದ ಜಾಗದಲ್ಲಿ ಸ್ವಲ್ಪ ಒತ್ತಡದ ವಾತಾವರಣ ಇರಲಿದೆ.
ಕನ್ಯಾ ರಾಶಿ: ನಿಮ್ಮ ಹಣವನ್ನು ಇಂದು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಲಾಭ ಪಡೆಯಬಹುದು. ಬೇರೆಯವರು ನಿಮ್ಮ ಬಳಿ ಕಷ್ಟ ಹೇಳಿಕೊಳ್ಳಲು ಬಂದರೆ ಅದನ್ನು ನಿರ್ಲಕ್ಷಿಸಿ,ಇದು ನಿಮ್ಮ ಮನಸ್ಸಿನ ಶಾಂತಿಯನ್ನು ಹಾಳು ಮಾಡಬಹದು. ಇಂದಿನ ದಿನ ನೀವು ನಿಮಗಾಗಿ ಕೊಂಚ ಸಮಯ ತೆಗೆದುಕೊಂಡು ನಿಮ್ಮ ಬಗ್ಗೆ ಯೋಚಿಸುವುದು ಉತ್ತಮ.
ತುಲಾ ರಾಶಿ: ನಿಮ್ಮ ಆಹಾರದ ಮೇಲೆ ಕೊಂಚ ಗಮನಹರಿಸಿ. ಇಂದು ವ್ಯಾಪಾರದಲ್ಲಿ ನೀವು ಬಹಳ ದೊಡ್ಡ ಮಟ್ಟದಲ್ಲಿ ಲಾಭ ಕಾಣಲಿದ್ದೀರಿ. ಇನ್ನು ಇಂದು ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ ಬಗ್ಗೆ ಹಲವು ಬಾರಿ ಯೋಚಿಸಿ ನಂತರ ಆ ಕೆಲಸಕ್ಕೆ ಕೈ ಹಾಕುವುದು ಉತ್ತಮ. ಇಂದಿನ ದಿನ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂತೋಷದ ಸಮಯವನ್ನು ಕಳೆಯಲಿದ್ದೀರಿ.
ವೃಶ್ಚಿಕ ರಾಶಿ: ನಿಮ್ಮ ಮೇಲೆ ನೀವು ನಂಬಿಕೆ ಇಟ್ಟು ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ಇಂದು ಜಯ ಕಾಣಲಿದ್ದೀರಿ. ಇಂದಿನ ದಿನ ನೀವು ಒಬ್ಬ ಅಪರಿಚಿತ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಇನ್ನು ಇಂದು ಅವರು ನೀಡುವ ಸಲಹೆ ನಿಮ್ಮ ಜೀವನವನ್ನು ಬದಲಿಸುತ್ತದೆ. ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಸಮಯ ಕಳೆಯುವ ಮೂಲಕ ನಿಮ್ಮ ಮನಸ್ಸಿಗೆ ಕೊಂಚ ಸಂತೋಷ ಸಿಗಲಿದೆ.
ಧನು ರಾಶಿ: ಇಂದಿನ ದಿನ ಧನು ರಾಶಿಯವರು ಬಹಳ ಲಾಭದಾಯಕವಾಗಿರಲಿದೆ. ವಿದೇಶದಲ್ಲಿ ವ್ಯಾಪಾರ ಮಾಡುತ್ತಿರುವವರು ಇಂದು ದೊಡ್ಡ ಲಾಭವನ್ನು ಪಡೆಯಲಿದ್ದಾರೆ. ಇಂದು ನೀವು ನಿಮ್ಮ ಸ್ನೇಹಿತರು ಹಾಗೆ ಕುಟುಂಬಸ್ಥರ ಜೊತೆಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ನಿಮ್ಮ ಪ್ರೀತಿಪಾತ್ರರ ತೋಳುಗಳಲ್ಲಿ ಇಂದು ನೀವು ನೆಮ್ಮದಿ ಹಾಗೂ ಆನಂದವನ್ನು ಕಾಣಲಿದ್ದೀರಿ.
ಮಕರ ರಾಶಿ: ಇಂದು ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಜಯ ಕಾಣಲಿದ್ದೀರಿ. ಇನ್ನು ನಿಮ್ಮ ಆಪ್ತರು ಕೊಡುವ ಸಲಹೆಗಳನ್ನು ತೆಗೆದುಕೊಂಡು ಅದರಿಂದ ಯಾವುದಾದರೂ ಉಪಯುಕ್ತ ಕೆಲಸವನ್ನು ಶುರು ಮಾಡುವುದಕ್ಕೇ ಇದು ಒಳ್ಳೆಯ ದಿನ. ಇಂದಿನ ದಿನ ನಿಮ್ಮ ಪ್ರೀತಪಾತ್ರರ ಜೊತೆಗೆ ಉತ್ತಮವಾದ ಸಂತೋಷ ಸಮಯವನ್ನು ಕಳೆಯಲಿದ್ದೀರಿ.
ಕುಂಭ ರಾಶಿ: ಇಷ್ಟು ದಿನ ಪೂರ್ತಿಯಾಗದ ಕೆಲಸಗಳನ್ನು ಇಂದು ನೀವು ಪೂರ್ಣಗೊಳಿಸುವ ಸಾಧ್ಯತೆ ಇದೆ. ಕೆಲಸದ ಜಾಗದಲ್ಲಿ ಇಂದು ಕೊಂಚ ಗಮನ ಹರಿಸಿ ಕೆಲಸ ಮಾಡುವುದು ಉತ್ತಮ. ನೀವು ಇಂದು ಕೊಂಚ ತಪ್ಪು ಮಾಡಿದರು ಅದು ನಿಮಗೆ ಮುಂದಿನ ದಿನಗಳಲ್ಲಿ ಹಾನಿ ಮಾಡಬಹುದು. ಇನ್ನು ಹಣದ ಖರ್ಚಿನ ಮೇಲೆ ಕೊಂಚ ನಿಗಾ ಇರಲಿ. ಅನಗತ್ಯವಾಗಿ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಿ.
ಮೀನಾ ರಾಶಿ: ಇಂದಿನ ದಿನ ನಿಮ್ಮ ಆಪ್ತರೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಅನಗತ್ಯವಾಗಿ ಯಾರ ಜೊತೆಗೂ ವಾದಕ್ಕೆ ನಿಲ್ಲಬೇಡಿ. ಇದರಿಂದ ನಿಮ್ಮ ಸಂಬಂಧಗಳು ಕೆಡುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಜೊತೆಗೆ ಇಂದಿನ ದಿನ ನೀವು ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ.