Mahindra Thar: ಭಾರತದಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ ಮಹೇಂದ್ರ ಥಾರ್, ಈ ಒಂದೇ ಒಂದು ಕಾರಣಕ್ಕೆ ಮುಗಿ ಬಿದ್ದು ಕಾರ್ ಬುಕ್ ಮಾಡ್ತಿದ್ದಾರೆ ಜನ, ಸ್ಟಾಕ್ ಕೂಡ ಖಾಲಿ ಖಾಲಿ .
ಅಷ್ಟೇ ಅಲ್ಲದೆ ಮಹೀಂದ್ರ ಥಾರ್ 2024 ರ ಜನವರಿಯಲ್ಲಿ ಬಾರಿ ಬುಕಿಂಗ್ ಮೂಲಕ ಮಾರಾಟದಲ್ಲಿ ದಾಖಲೆ ಸೃಷ್ಟಿಸಲು ಮುಂದಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವುದರಿಂದ ಯುವಜನರ ಆಕರ್ಷಿತರಾಗುತ್ತಾರೆ.
Mahindra Thar: ಮಹೇಂದ್ರ ಭಾರತದ ಟಾಪ್ ಕಾರ್ ಮಾರಾಟ ಕಂಪನಿಗಳಲ್ಲಿ ಒಂದು. ಯಾವುದೇ ಹೊಸ ಕಾರ್ ಬಿಡುಗಡೆ ಮಾಡಿದರು ಒಂದಲ್ಲ ಒಂದು ವಿಭಿನ್ನತೆಯನ್ನು ತರುತ್ತಿದೆ. ಮಹೇಂದ್ರ ಕಂಪನಿಯ ಮಹಿಂದ್ರಾ ಥಾರ್ ದೇಶಿಯ ಅಪ್ಲಿಕೇಶನ್ ಆಫ್ ರೋಡರ್ ವಿಭಾಗದಲ್ಲಿ ಹೆಚ್ಚಿನ ಬೇಡಿಕೆ ಹೊಂದಿದೆ. ರೋಡರ್ ವಿಭಾಗದಲ್ಲಿ ಹೆಚ್ಚಿನ ಸ್ಥಾನ ಪಡೆದಿರುವ ಮಹೀಂದ್ರಾ ಥಾರ್ ಈಗ ಮಾರುತಿ ಜಿಮ್ನಿಗೆ ಬಾರಿ ಪೈಪೋಟಿ ನೀಡುತ್ತಿದೆ.
ಅಷ್ಟೇ ಅಲ್ಲದೆ ಮಹೀಂದ್ರ ಥಾರ್ 2024 ರ ಜನವರಿಯಲ್ಲಿ ಬಾರಿ ಬುಕಿಂಗ್ ಮೂಲಕ ಮಾರಾಟದಲ್ಲಿ ದಾಖಲೆ ಸೃಷ್ಟಿಸಲು ಮುಂದಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವುದರಿಂದ ಯುವಜನರ ಆಕರ್ಷಿತರಾಗುತ್ತಾರೆ. ಮಹಿಂದ್ರಾ ಥಾರ್ SUV ಖರೀದಿಸಲು ಜನರ ಕ್ಯೂ ನಿಲ್ಲುತ್ತಾ ಇದ್ದಾರೆ. ಅಗತ್ಯವಿರುವ ಇತರ SUV ಗಳಿಂದ ಮಹಿಂದ್ರಾ ಥಾರ್ ಮೇಲಿನ ಬೇಡಿಕೆ ಹೆಚ್ಚಿದೆ.
ಮಹೀಂದ್ರ ಕಂಪನಿಯು ಜನವರಿ 2024 ರಲ್ಲಿ ಥಾರ್ ನ ಒಟ್ಟು 6, 059 ಯುನಿಟ್ ಗಳನ್ನು ಮಾರಾಟ ಮಾಡಿದೆ. ಅದರಲ್ಲಿ ಡೀಸೆಲ್ ರೂಪಾಂತರಗಳು 5, 402 ಯುನಿಟ್ಗೆ ಮಾರಾಟವಾಗಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಮಹೀಂದ್ರಾ ಥಾರ್ ನ ವಿಶೇಷತೆಗಳು ಏನೇನು?
ಕಡಿಮೆ ಬೆಲೆ: ಥಾರ್ SUV 9. 99 ಲಕ್ಷ ರೂಪಾಯಿ. ಇದು ಇತರ SUV ಗಳಿಗೆ ತುಂಬಾ ಕಡಿಮೆ ಬೆಲೆ ಹೊಂದಿದೆ
ಶಕ್ತಿಯುತ ಎಂಜಿನ್: ಥಾರ್ 2. 0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 2. 2 ಲೀಟರ್ mHawk ಡೀಸೆಲ್ ಎಂಜಿನ್ ಹೊಂದಿದೆ. ಎರಡೂ ಎಂಜಿನ್ಗಳು ಉತ್ತಮ ಶಕ್ತಿ ಮತ್ತು ಟಾರ್ಕ್ ಕಾರ್ಯ ನಿರ್ವಹಣೆ ಮಾಡುತ್ತವೆ.
ಆಫ್ ರೋಡ್ ಸಾಮರ್ಥ್ಯ: ಥಾರ್ ತನ್ನ ಅದ್ಭುತ ಆಫ್ ರೋಡ್ ಸಾಮರ್ಥ್ಯಕ್ಕೆ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಇದು ಯಾವುದೇ ಭೂಪ್ರದೇಶದಲ್ಲಿ ಸುಲಭವಾಗಿ ಚಲಿಸಲು ಸಾಧ್ಯ.
ಆಧುನಿಕ ಫೀಚರ್ ಮಾಹಿತಿ: ಥಾರ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಎಲ್ಇಡಿ ಹೆಡ್ಲ್ಯಾಂಪ್ಗಳು ಮತ್ತು ಟೈರ್ ಪ್ರೆಶರ್ ಮ್ಯಾನಿಟರಿಂಗ್ ಸಿಸ್ಟಮ್
ಭದ್ರತೆ: ಥಾರ್ 2 ಏರ್ಬ್ಯಾಗ್ಗಳು, ABS, EBD ಮತ್ತು ISOFIX ಚೈಲ್ಡ್ ಸೀಟ್ ಅಂತಹ ಭದ್ರತಾ ಸೌಲಭ್ಯ ಹೊಂದಿದೆ.
ಮಹೀಂದ್ರ ಥಾರ್ ಎಂಜಿನ್ ಸಾಮರ್ಥ್ಯದ ವಿವರಣೆ:-
ಮಹೀಂದ್ರಾ ಥಾರ್ ಎರಡು ಶಕ್ತಿಯುತ ಎಂಜಿನ್ ಆಯ್ಕೆಗಳಿವೆ. ಅವುಗಳ ಬಗ್ಗೆ ತಿಳಿಯೋಣ..
1) 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ವಿವರ:
- 150 ಬಿಹೆಚ್ಪಿ ಪವರ್
- 320 ಎನ್ ಎಂ ಟಾರ್ಕ್
- 6-ಸ್ಪೀಡ್ ಮ್ಯಾನುವಲ್ ಅಥವಾ *6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
2) 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ವಿವರ :-
- 130 ಬಿಹೆಚ್ಪಿ ಪವರ್
- 300 ಎನ್ ಎಂ ಟಾರ್ಕ್
- 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
ಭಾರತದಲ್ಲಿ ಲಾಂಚ್ ಆಗಿದೆ ಬಹುನಿರೀಕ್ಷಿತ Triumph Scrambler X1200, ಹೇಗಿದೆ ಫೀಚರ್ಸ್?
ಇತರ ಲಕ್ಷಣಗಳು:-
- ಇದು 7-ಇಂಚಿನ ಟಚ್ಸ್ಕ್ರೀನ್, ಇನ್ಫೋಟೈನ್ಮೆಂಟ್ ಸಿಸ್ಟಮ್,
- ರೂ-ಮೌಂಟೆಡ್ ಆಡಿಯೋ ಸ್ಪೀಕರ್ಗಳು,ಬಹು-ಕಲರ್ ಡಿಸ್ಪ್ಲೇ
- ಸ್ಟೀರಿಂಗ್, ಹಾಗೂ ವೀಲ್ ಮೌಂಟೆಡ್ ಕಂಟ್ರೋಲ್ಗಳು,
ಥಾರ್ ಯಾರಿಗೆ ಹೆಚ್ಚು ಉಪಯುಕ್ತವಾಗಿದೆ?
- ಸಾಹಸಮಯ ಚಟುವಟಿಕೆಗಳನ್ನು ಇಷ್ಟಪಡುವವರು
- ಕಠಿಣ ಭೂಪ್ರದೇಶದಲ್ಲಿ ವಾಹನ ಚಲಿಸುವವರು
- ಶಕ್ತಿಯುತ ಮತ್ತು ಸ್ಟೈಲಿಶ್ SUV ಇಷ್ಟ ಪಡುವವರು
Mahindra Thar is getting a huge sale because of this good reason.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.