Car Maintenance tips :ಕಾರ್ ಸ್ಟಾರ್ಟ್ ಆಗದೆ ಇದ್ದಾಗ ಈ 3 ಟಿಪ್ಸ್ ಫಾಲೋ ಮಾಡಿದ್ದಾರೆ ಸಾಕು ಮೆಕ್ಯಾನಿಕ್ ಕರೆಯುವ ಅವಶ್ಯಕತೆ ಇರುವುದೇ ಇಲ್ಲ !!
if your car wont start then try these 3 trips, car starting issue tips
Car Maintenance tips : ಇದು ಕಲಿಯುಗ ಅದರಲ್ಲೂ ಟೆಕ್ನಾಲಜಿ ಮುಂದೆವರೆದಿರುವ ಯುಗ. ಈ ಕಾಲದಲ್ಲಿ ಎಲ್ಲರೂ ಟ್ರಾಸ್ಪೋರ್ಟಷನ್ ಗಾಗಿ ಒಂದಲ್ಲ ಒಂದು ರೀತಿಯ ವಾಹನಗಳನ್ನು ಬಳಸುತ್ತಲೇ ಇರುತ್ತಾರೆ, ಎಲ್ಲರೂ ಕೂಡ ವಾಹನಗಳ ಮೇಲೆ ಅವಲಂಬಿತವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ, ಸಮಯಕ್ಕೆ ಬಸ್ ಬಂದಿಲ್ಲ ಅಂದ್ರೆ ಅಥವಾ ಆಟೋ ಟ್ಯಾಕ್ಸಿ ಬಂದಿಲ್ಲ ಅಂದ್ರೆ ಪರೆದಾಡಿಬಿಡುತ್ತಾರೆ, ಯಾಕೆಂದರೆ ಎಲ್ಲರೂ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ, ಇದಕ್ಕೆ ಕಾರಣ ಕೂಡ ಇದೆ ಅದೇನೆಂದರೆ ಸಮಯಕ್ಕೆ ಸರಿಯಾಗಿ ಶಾಲ ಕಚೇರಿಗೆ ಹೋಗಲೇಬೇಕು ಇಲ್ಲವಾದ್ದರೆ ಸಂಬಳ ಕಟ್ ಮಾಡುತ್ತಾರೆ ಅಥವಾ ಓನರ್ ಬಯ್ಯುತ್ತಾನೆ ಅಂತಲೋ ಏನೋ ಒಂದು ಕಾರಣಕ್ಕೆ ಸರಿಯಾದ ಸಮಯಕ್ಕೆ ನಾವು ಹೋಗ ಬೇಕಾದ ಜಾಗಕ್ಕೆ ಹೋಗಿ ಮುಟ್ಟಲೇ ಬೇಕು ಅಲ್ಲವೇ.
ಸಮಸ್ಯೆ ಈಗಿರುವಾಗ ಪ್ರತಿಯೊಬ್ಬರ ಬಳಿಯೂ ಒಂದಲ್ಲ ಒಂದು ರೀತಿ ವಾಹನಗಳು ಇದ್ದೆ ಇರುತ್ತವೆ, ಅದರಲ್ಲಿ ಮುಖ್ಯ ವಾಗಿ ಹೇಳುವುದದಾದ್ರೆ, ಅದು ಕಾರ್, ಕಾರ್ ಅಂತೂ ಇತ್ತೀಚಿನ ದಿನಗಳಲ್ಲಿ ಬಹಳ ಚಾಲನೆಯಲ್ಲಿ ಇರುವಂತಹ ವಾಹನ ಎಂದು ಹೇಳಿದರೆ ತಪ್ಪಾಗಲಾರದು, ಮತ್ತು ಬೈಕ್ ಗಳ ಬಗ್ಗೆ ನಿಮಗೆ ಗೊತ್ತಿರುವ ವಿಚಾರ ಏಕೆಂದರೆ, ಪ್ರತಿಯೊಂದು ಮನೆಯಲ್ಲೂ ಸಹ ಒಂದಲ್ಲ ಎರಡು ಮೂರೂ ಬೈಕ್ಗಳು ಇರುವುದು ಸರ್ವೇ ಸಾಮಾನ್ಯವಾಗಿದೆ, ಇನ್ನು ಬೈಕ್ ಗಳಲ್ಲಿ ಏನಾದರು ಸಮಸ್ಯೆ ಬಂದರೆ ತೊಂದರೆ ಆಗುವುದಿಲ್ಲ ಅತ್ತಿರದ ಮೆಕ್ಯಾನಿಕ್ ಶಾಪ್ ಗೆ ಹೋಗಿ ಸರಿ ಮಾಡಿಸಬಹುದು,
ಆದರೆ ಇದೆ ಸಮಸ್ಯೆ ಕಾರ್ ನಲ್ಲಿ ಆದರೆ ಏನು ಮಾಡುವುದು ಕಾರ್ ಅಂತೂ ಕೈ ಇಂದ ತಳ್ಳಲು ಸಾಧ್ಯವಿಲ್ಲ ಅಲ್ಲವೇ, ಆಗ ನೀವು ಏನು ಮಾಡುವಿರಿ ಸಾಮಾನ್ಯವಾಗಿ ಎಲ್ಲರ ತಲೆಯಲ್ಲಿ ಮೊದಲು ಬರುವ ವಿಚಾರವೇ ಅತ್ತಿರದಲ್ಲಿ ಯಾರ್ ಆದರೂ ಮೆಕ್ಯಾನಿಕ್ ನ ಕರೆದುಕೊಂಡು ಬರೋಣ ಎಂದು, ಮೆಕ್ಯಾನಿಕ್ ಸುಮ್ಮನೆ ಬರುತ್ತಾನಾ, ಸಾವಿಚಾರಾರು ರೂಪಾಯಿ ಹಣವನ್ನು ಕೆಳುತ್ತಾನೆ, ಇದಕ್ಕೆ ಇಷ್ಟೆಲ್ಲಾ ಯೋಚನೆ ಮಾಡೋದು ಬೇಡ ಹಾಗು ಸಮಸ್ಯೆ ಹಾಗುವುದು ಬೇಡ ಎಂದು ನಾವಿಂದು ಈ ಅಂಕಣದ ಮೂಲಕ ನೀವೇ ಸ್ವತಃ ಟ್ರೈ ಮಾಡಬಹುದಾದಂತಾ ಕೆಲವು ಟಿಪ್ಸ್ ಗಳನ್ನೂ ತಿಳಿಸುತ್ತೇವೆ ಅವುಗಳನ್ನು ಅನುಸರಿಸಿದರೆ ಸಾಕು. ಹೆಚ್ಚು ಕಡಿಮೆ ನಿಮ್ಮ ಕಾರ್ ತತ್ಕ್ಷಣದಲ್ಲಿ ರೆಡಿ ಆಗಿಬಿಡುತ್ತದೆ.
Battery issue – ಮೊದಲು ನೀವು ಮಾಡಬೇಕಾದ ಕೆಲಸ ಏನೆಂದರೆ ನಿಮ್ಮ ಕಾರಿನ ಬ್ಯಾಟರಿಯನ್ನು ಚೆಕ್ ಮಾಡುವುದು, ಸಾಮಾನ್ಯವಾಗಿ ಎಲ್ಲಾ ಕಾರುಗಳು ಬ್ಯಾಟರಿ ಡೌನ್ ಆದಾಗ ಅಂದರೆ ಬ್ಯಾಟರಿ ರಿಚಾರ್ಜ್ ಆಗದೆ ಇದ್ದಾಗ ಸ್ಟಾರ್ಟ್ ಆಗಲು ಕಷ್ಟ ಪಡುತ್ತವೆ, ಮೊದಲು ನೀವು ಬ್ಯಾಟರಿಯನ್ನು ಚೆಕ್ ಮಾಡಬೇಕು ಬ್ಯಾಟರಿ ರಿಚಾರ್ಜ್ ಆಗಿದೆಯ ಅಥವಾ ಕನೆಕ್ಷನ್ ಏನಾದರೂ ಬಿಟ್ಟು ಕೊಂಡಿದೆಯ ಎಂದು, ಸಾಮಾನ್ಯವಾಗಿ ಕನೆಕ್ಷನ್ ಬಿಟ್ಟುಕೊಳ್ಳುವುದಿಲ್ಲ ಆದರೆ ಎರಡು ಕಾರಣದಿಂದ ಬ್ಯಾಟರಿ ಕನೆಕ್ಷನ್ ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ ಒಂದು ಕಾರನ್ನು ಅಳ್ಳ ದಿಣ್ಣೆಯಲ್ಲಿ ಇಳಿಸಿದಾಗ ಕಾರ್ ಬ್ಯಾಟರಿ ಕನೆಕ್ಷನ್ ಬಿಟ್ಟು ಹೋಗುವ ಸಾಧ್ಯತೆ ಒಂದಾದರೆ ಮತ್ತೊಂದು ಇಲಿಗಳ ಕಾಟ, ನಿಮ್ಮ ಕಾರಿನ ಒಳಗಡೆ ಇಲಿಗಳು ಸೇರಿಕೊಂಡು ಬ್ಯಾಟರಿ ವೈರನ್ನು ಕಟ್ ಮಾಡಿದರೆ ಕನೆಕ್ಷನ್ ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ, ಹಾಗಾಗಿ ನೀವು ಮೊದಲು ಬ್ಯಾಟರಿ ಕನೆಕ್ಷನ್ ಸರಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಬೇಕು.
Ignition switch issue – ಇಗ್ನಿಶನ್ ಸ್ವಿಚ್ – ಇಗ್ನಿಶನ್ ಸ್ವಿಚ್ ವರ್ಕ್ ಆಗುವುದು ಬ್ಯಾಟರಿ ಕನೆಕ್ಷನ್ ಇದ್ದಾಗ ಮಾತ್ರ ಹಾಗಾಗಿ ಕಾರ್ ಇಗ್ನಿಶನ್ ಸ್ವಿಚ್ ಅನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ, ಕಾರ್ ಇಗ್ನಿಶನ್ ಸ್ವಿಚ್ ವರ್ಕ್ ಆಗುತ್ತಿಲ್ಲ ಎಂದವಾದರೆ ಬಹುಶಹ ಇಗ್ನೀಶನ್ ಗೆ, ಬ್ಯಾಟರಿಯಿಂದ ಪವರ್ ಸಪ್ಲೈ ಆಗುತ್ತಿಲ್ಲ ಎಂದು ಅರ್ಥ, ಹೆಚ್ಚಿನ ಸಮಯದಲ್ಲಿ ಈ ರೀತಿ ಆದಾಗ ಕಾರ್ ಕೆಲವೊಮ್ಮೆ ಸ್ಟಾರ್ಟ್ ಆಗುವುದಿಲ್ಲ.
Smart key or key fob issue – ಮೊದಲೆಲ್ಲಾ ಅತ್ಯಾಧುನಿಕ ಉಪಕರಣಗಳು ಮತ್ತೆ ಟೆಕ್ನಾಲಜಿ ಇಲ್ಲದ ಕಾರಣ ಕಾರುಗಳನ್ನು ಮೊದಲು ನಾವು ಕಿ ಇಂದಲೇ ತೆಗೆಯಬೇಕಾಗಿತ್ತು ಮತ್ತು ಕೀ ಯಿಂದಲೇ ಸ್ಟಾರ್ಟ್ ಮಾಡಬೇಕಾಗಿತ್ತು ಆದರೆ ಈಗ ಟೆಕ್ನಾಲಜಿ ಇಂಪ್ರೂ ಆಗಿರೋದ್ರಿಂದ ಸ್ಮಾರ್ಟ್ ಕೀ ಇಂದಲೇ ಸ್ಟಾರ್ಟ್ ಮಾಡಬಹುದು ಬಹುಶಹ ನಿಮ್ಮ ಕಾರ್ ಸ್ಟಾರ್ಟ್ ಆಗುತ್ತಿಲ್ಲವೆಂದರೆ ಸ್ಮಾರ್ಟ್ ಕಿ ನಲ್ಲಿ ಸಮಸ್ಯೆ ಇರಬಹುದು ಒಮ್ಮೆ ಚೆಕ್ ಮಾಡಿಕೊಳ್ಳಿ. ಈ ಎಲ್ಲ ಸಣ್ಣ ಪ್ರಯತ್ನಗಳು ಮುಗಿದ ನಂತರ ಯಾವುದು ಉಪಯೋಗವಾಗಿಲ್ಲವೆಂದರೆ ಕೊನೆಗೆ ಮೆಕಾನಿಕ್ ಅವರನ್ನು ಕರೆಸಬೇಕು .