Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

340 ಕಿಮೀ ಮೈಲೇಜ್ ಕೊಡುವ BYD Dolphin EV ಕಾರು, ಶೀಘ್ರದಲ್ಲೇ ಮಾರ್ಕೆಟ್ ಗೆ ಬರಲಿದೆ, ಇದರ ವಿಶೇಷತೆಗಳನ್ನು ತಿಳಿದು ಬುಕ್ ಮಾಡಲು ಮುಗಿಬಿದ್ದ ಜನತೆ.

100kW DC ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ 30 ಇಂದ 80% ವರೆಗು ಚಾರ್ಜ್ ಆಗಲು ಕೇವಲ 29 ನಿಮಿಷ ತೆಗೆದುಕೊಳ್ಳುತ್ತದೆ. 11kW AC 3 ಸ್ಟೆಪ್ ಚಾರ್ಜರ್ ಸಹ ಹೊಂದಿದೆ.

BYD Dolphin EV: Build Your Dreams (BYD) ಇದು ಜನರಿಗೆ ಅನುಕೂಲ ಅಗುವಂಥ ಎಲೆಕ್ಟ್ರಿಕ್ ಕಾರ್ ಮತ್ತು ಬೈಕ್ ಗಳನ್ನು ತಯಾರಿಸುವ ಕಂಪನಿ ಆಗಿದೆ. ಈಗಾಗಲೇ ಭಾರತದಲ್ಲಿ ಸಹ ಇವರ ಟ್ರೇಡ್ ಮಾರ್ಕ್ ಶುರುವಾಗಿದ್ದು, ಇಂಡಿಯನ್ ಮಾರ್ಕೆಟ್ ನಲ್ಲಿ Atto3, e6 MPV ಗಳನ್ನು ಲಾಂಚ್ ಮಾಡಿದೆ.

ಆದರೆ ಶೀಘ್ರದಲ್ಲೇ ಭಾರತದಲ್ಲಿ ಇವರ ಬ್ರ್ಯಾಂಡ್ ಶುರು ಮಾಡುವ ಪ್ಲಾನ್ ಹೊಂದಿದೆ BYD. ಈ ಬ್ರ್ಯಾಂಡ್ ನಮ್ಮ ದೇಶಕ್ಕೆ ಬಂದರೆ, ಮಧ್ಯಮವರ್ಗದವರು ಕೊಂಡುಕೊಳ್ಳಬಹುದಾದ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರ್ ಗಳು ಲಭ್ಯವಿರಲಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

BYD Dolphin EV ವಿಶೇಷತೆಗಳು:

BYD Dolphin ಅನ್ನು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಾಗಿದ್ದು, ಈ ಕಾರ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಲಭ್ಯವಿದೆ. 64.4 kWh, 44.9 kWh ಈ ಎರಡು ಬ್ಯಾಟರಿ ಆಯ್ಕೆ ಹೊಂದಿದ್ದು, ಈ ಬ್ಯಾಟರಿ ಗಳು 427 ಕಿಮೀ ವರೆಗು ವ್ಯಾಪ್ತಿ ಹೊಂದಿದೆ. ಇನ್ನು ಈಗ ಇರುವ ಮಾಡೆಲ್ 340 ಕಿಮೀ WLTP ರೇಟೆಡ್ ವ್ಯಾಪ್ತಿ ಕೊಡುತ್ತದೆ, ಹಾಗೂ ಬೂಸ್ಟೆಡ್ ಮಾಡೆಲ್ 310 ಕಿಮೀ ವ್ಯಾಪ್ತಿ ಹೊಂದಿದೆ. ಈ ಕಾರ್ ಗಳಲ್ಲಿ LFP ಬ್ಲೇಡ್ ಬ್ಯಾಟರಿ ಗಳನ್ನು ಬಳಸಲಾಗುತ್ತದೆ.

ಚಾರ್ಜಿಂಗ್ ಮತ್ತು ಪರ್ಫಾರ್ಮೆನ್ಸ್:

100kW DC ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ 30 ಇಂದ 80% ವರೆಗು ಚಾರ್ಜ್ ಆಗಲು ಕೇವಲ 29 ನಿಮಿಷ ತೆಗೆದುಕೊಳ್ಳುತ್ತದೆ. 11kW AC 3 ಸ್ಟೆಪ್ ಚಾರ್ಜರ್ ಸಹ ಹೊಂದಿದೆ. ಅಷ್ಟೇ ಅಲ್ಲದೆ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಹೊಂದಿದ್ದು, ವೆಹಿಕಲ್ ಟು ಲೋಡ್ ಜೊತೆಗೆ ಬರುತ್ತದೆ. ಇದರ ಮುಖ್ಯ ವಿಶೇಷತೆ ಏನು ಎಂದರೆ ಹೊರಗಿನ ಸಾಧನಗಳನ್ನು ಬಳಸಿಕೊಂಡು ಚಾರ್ಜ್ ಮಾಡಬಹುದು.

Ration Card: ನೂತನ ಪಡಿತರ ಚೀಟಿ ಪಡೆಯಲು ಅರ್ಜಿ ಹಾಕಿದವರಿಗೆ ಸಿಹಿ ಸುದ್ದಿ

ಕೇವಲ 7 ಸೆಕೆಂಡ್ ಗಳಲ್ಲಿ 0 ಇಂದ 100 kmph ಸ್ಪೀಡ್ ಹೊಂದುತ್ತದೆ. ಈ ಕಾರ್ ಚಲಿಸುವುದು ಎಲೆಕ್ಟ್ರಿಕ್ ಮೋಟರ್ ಇಂದ, 201bhp ಹಾಗೂ 290nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರ ಮ್ಯಾಕ್ಸಿಮಮ್ ಸ್ಪೀಡ್ 160kmph ಆಗಿದೆ. ಸ್ಪೋರ್ಟ್, ನಾರ್ಮಲ್, ಎಕಾನಮಿ ಮತ್ತು ಸ್ನೋ.. ಹೀಗೆ 4 ರೈಡಿಂಗ್ ಮೋಡ್ ಇದರಲ್ಲಿದೆ.

ಇನ್ನಿತರ ವಿಶೇಷತೆಗಳು:

BYD Dolphin ನಲ್ಲಿ ಆರಾಮದಾಯಕ ಸೀಟ್ ಗಳು, ಉತ್ತಮ ಹೆಡ್ ಲ್ಯಾಮ್ಪ್, LED ಲೈಟ್, ಸನ್ ರೂಫ್ ಇದೆಲ್ಲವನ್ನು ಹೊಂದಿದೆ. ಇದರ ಸೇಫ್ಟಿ ಬಗ್ಗೆ ಹೇಳುವುದಾದರೆ, ಎಲೆಕ್ಟ್ರಾನಿಕ್ ಸ್ಥಿರತೆ, ಆಟೊಮ್ಯಾಟಿಕ್ ಕಂಟ್ರೋಲ್ ಸೇರಿದಂತೆ ಇನ್ನಿತರ ವಿಶೇಷತೆಗಳನ್ನು ಹೊಂದಿದೆ.

BYD Dolphin EV may launch soon in India. Here are its features and specifications.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment